ಉಡುಪಿ:ಶ್ರೀ ನಿಕೇತನ ಪ್ರೌಢ ಶಾಲೆ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ

ಮಟಪಾಡಿ:ಇಂಟರಾಕ್ಟ್ ಕ್ಲಬ್ ಶ್ರೀನಿಕೇತನ ಪ್ರೌಢ ಶಾಲೆ ಮಟಪಾಡಿ ಇದರ 2025-260 ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.18ರಂದು ಶಾಲಾ ಸಭಾಂಗಣದಲ್ಲಿ ಜರುಗಿತು. ಪದಪ್ರದಾನ ಅಧಿಕಾರಿ ಬ್ರಹ್ಮಾವರ ರೋಟರಿಯ ಅಧ್ಯಕ್ಷರಾದ ಸತೀಶ್ ಶೆಟ್ಟಿಯವರು ಇಂಟರಾಕ್ಟ್ ಅಧ್ಯಕ್ಷೆ ಪ್ರೇರಣಾರವರಿಗೆ ಪದಗ್ರಹಣ ನೆರವೇರಿಸಿದರು.

ಮುಖ್ಯ ಅತಿಥಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ, ಶ್ಯಾಮಲರವರು ಶಾಲೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಪೂರ್ವಾಧ್ಯಕ್ಷರಾದ ಕಾರ್ಯಚಟುವಟಿಕೆಯ ಅರುಣ್‌ ಕುಮಾರ್ ಶೆಟ್ಟಿಯವರು ಇಂಟರಾಕ್ಟ್ ಕ್ಲಬ್‌ನ ಉದ್ದೇಶಗಳನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‌ನ ಸಂಯೋಜಕರಾದ ರಘುಪತಿ ಬ್ರಹ್ಮಾವರ, ಶಿಕ್ಷಕ ಸಂಯೋಜಕರಾದ ಜಯಲಕ್ಷ್ಮೀ ಶೆಟ್ಟಿ, ಇಂಟರಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು, ರೋಟರಿ ಕಾರ್ಯದರ್ಶಿ ರೆಕ್ಸನ್ ಮೋನಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕಾರ್ಯದರ್ಶಿ ಅನನ್ಯ ವಂದಿಸಿದರು.