ಉಡುಪಿ: ಜಗತ್ತಿನಾದ್ಯಂತ ಭಯಾನಕತೆ ಸೃಷ್ಟಿಸಿದ ಕೊರೊನಾ ಸೋಂಕಿನ ಭೀತಿ ಇದೀಗ ಉಡುಪಿಯಲ್ಲೂ ಆತಂಕ ಉಂಟು ಮಾಡಿದೆ.
ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶಂಕಿತ ಕೊರೊನಾ ಪ್ರಕರಣ ದಾಖಲಾಗಿದೆ.
ಈಚೆಗೆ ವಿದೇಶದಿಂದ ಬಂದಿದ್ದ ಕಾರ್ಕಳ ಮುನಿಯಾಲು ಗ್ರಾಮದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ವ್ಯಕ್ತಿಗೆ ಅಜ್ಜರಕಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶೀತ, ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ವಹಿಸಿದ್ದು, ವ್ಯಕ್ತಿಯ ಮಾದರಿಯನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ. ವರದಿ ಎರಡು ದಿನಗಳಲ್ಲಿ ಬರಲಿದ್ದು, ವ್ಯಕ್ತಿಯಲ್ಲಿ ಸೋಂಕು ಇದೆಯೇ ಅಥವಾ ಇಲ್ಲವೋ ಎನ್ನುವುದು ತಿಳಿಯಲಿದೆ.