ಉಡುಪಿ: ಸುನೀಲ್ ಸಾಲಿಯಾನ್ ಕಡೆಕಾರ್ ಗೆ ಸೇವಾ ರತ್ನ ಜಾನಪದ ಪ್ರಶಸ್ತಿ

ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಮತ್ತು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಇವರ ವತಿಯಿಂದ ಉಡುಪಿ ಅಮೃತ್ ಗಾರ್ಡನ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಸುನೀಲ್ ಸಾಲಿಯಾನ್ ಕಡೆಕಾರ್ ಅವರಿಗೆ ಸೇವಾ ರತ್ನ ಜಾನಪದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹಿರಿಯ ಜಾನಪದ ವಿದ್ವಾಂಸರಾದ ವೈ. ಎನ್. ಶೆಟ್ಟಿ, ಗಾಂಧಿಯನ್ ಸೆಂಟರ್ ಫಿಲೋಸೊಫಿಕಲ್ ಆರ್ಟ್ಸ್ & ಸೈಯನ್ಸ್ ನ ಪ್ರೊಫೇಸರ್ ವರದೇಶ ಹಿರೇಗಂಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ನಗರ ಸಭಾ ಸದಸ್ಯ ವಿಜಯ ಕೊಡವೂರು ಉಪಸ್ಥಿತರಿದ್ದರು.