ಉಡುಪಿ: ಹಿರಿಯ ನಾದಸ್ವರ ವಾದಕ ಅಲೆವೂರು ಬೊಗ್ರ ಶೇರಿಗಾರ್ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗ್ರಹದಲ್ಲಿ ನಿಧನರಾದರು.
ಅಸಂಖ್ಯಾತ ದೇವಸ್ಥಾನ, ಗರೋಡಿ, ದೈವಸ್ಥಾನ , ನಾಗರಾಧನೆಯಲ್ಲಿ ಹಿರಿಯ ನಾಗಸ್ವರ ವಾದಕರಾಗಿ ಅಲೆವೂರು ಬೋಗ್ರ ಶೇರಿಗಾರ್ ಪ್ರಸಿದ್ದಿಯನ್ನು ಪಡೆದಿದ್ದರು. ನಾಗಸ್ವರದ ಕಲಾರಾಧನೆಯನ್ನು ಆತ್ಮಸಮರ್ಪಣಾ ಮನೋಭಾವದಿಂದ ಕಾರ್ಯಗತಗೊಳಿಸಿ ಪಾರಂಪರಿಕ ಶೈಲಿಯಲ್ಲಿ ಕಲಾ ಮಾತೆಯ ಸೇವೆಯನ್ನು ಮಾಡಿದ ಅಪರೂಪದ ಕಲಾವಿದರು.
ಬೊಗ್ರ ಸೇರಿಗಾರ್ ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದರು. ಪ್ರಸಿದ್ದ ನಾಗಸ್ವರ ವಾದಕ ಉದಯ ಶೇರಿಗಾರ್ ಸಹಿತ ನಾಲ್ಕು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.












