ಉಡುಪಿ ಸೀನಿಯರ್ ಛೇಂಬರ್ ನಿಂದ ಅನಾಥಾಶ್ರಮಕ್ಕೆ ಬೆಡ್ ಶೀಟ್ ಕೊಡುಗೆ

ಉಡುಪಿ: ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ಲೀಜನ್ ವತಿಯಿಂದ ಸಮುದಾಯ ಸೇವಾ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರದ ಅಪ್ಪ-ಅಮ್ಮ ಅನಾಥಾಲಯಕ್ಕೆ ಅಗತ್ಯವಿದ್ದ ಬೆಡ್ ಶೀಟ್ ಗಳನ್ನು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಪ್ರಶಾಂತ್ ಪೂಜಾರಿ ಇವರಿಗೆ ಹಸ್ತಾಂತರಿಸಲಾಯಿತು.

ಸೀನಿಯರ್ ಛೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್ ನ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸೀನಿಯರ್ ಛೇಂಬರಿನ ಸಮುದಾಯ ಅಭಿವೃದ್ದಿ ಕಾರ್ಯಕ್ರಮದ ರಾಷ್ಟ್ರೀಯ ನಿರ್ದೇಶಕ ಚಿತ್ರಕುಮಾರ್, ಕರ್ನಾಟಕ ಬೆಳವಣಿಗೆ ಮತ್ತು ಅಭಿವೃದ್ದಿ ವಿಭಾಗದ ಸಂಯೋಜಕ ವಿಜಯಕುಮಾರ್ ಉದ್ಯಾವರ ಅತಿಥಿಗಳಾಗಿ ಭಾಗವಹಿಸಿದ್ದರು. ಶಿವಾನಂದ ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ಕುಮಾರ್ ಉದ್ಯಾವರ ವಂದಿಸಿದರು.

ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ರಾಜೇಶ್ ಟಿ ಆಚಾರ್ಯ, ನಿರ್ದೇಶಕ ತುಳಸೀದಾಸ್ ಸಾಲ್ಯಾನ್, ರವಿರಾಜ್ ಉದ್ಯಾವರ, ಮನೋಜ್ ಪರ್ಕಳ, ಲಕ್ಷ್ಮಣ್ ಉಪ್ಪೂರು ಹಾಅಗೂ ಫಲಾನುಭವಿಗಳು ಉಪಸ್ಥಿತರಿದ್ದರು.