ಉಡುಪಿ:ಸೀನಿಯರ್ ಛೇಂಬರ್ ನೇಜಾರ್ ಪದಗ್ರಹಣ ಕಾರ್ಯಕ್ರಮ

ಉಡುಪಿ:ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನೇಜಾರು ಇದರ ಪದಗ್ರಹಣ ಸಮಾರಂಭ ಬ್ರಹ್ಮಾವರದ ಹೋಟೆಲ್ ಆಶ್ರಯದ ಸಭಾಂಗಣದಲ್ಲಿ ಜರುಗಿತು. ನಿರ್ಗಮನ ಅಧ್ಯಕ್ಷ ನಿತ್ಯಾನಂದ ನೇಜಾರ್ ಸ್ವಾಗತಿಸಿ ಗತವರ್ಷದ ವರದಿ ವಾಚಿಸಿದರು. ಅತಿಥಿಗಳನ್ನು ಶ್ವೇತಾ ಎ.ನಾಯ್ಕ್ ಹಾಗೂ ಗುಣ ವರ್ಮಾ ಪರಿಚಯಿಸಿದರು. ಮುಖ್ಯ ಅತಿಥಿ ಸೀನಿಯರ್ ಚೇಂಬರ್ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ಧಗಂಗಯ್ಯ ಎಸ್. ನೂತನ ಅಧ್ಯಕ್ಷ ಸುರೇಶ್ ಅಮೀನ್ ರವರಿಗೆ ಪದಗ್ರಹಣ ನೆರವೇರಿಸಿ ಪ್ರತಿಜ್ಞಾವಿಧಿ ಬೋಧಿಸಿದರು.

ನೂತನ ವರ್ಷದ ಕಾರ್ಯಕ್ರಮದ ಅಂಗವಾಗಿ ಅಮ್ಮುಂಜೆ ಅಂಗನವಾಡಿ ಕೇಂದ್ರಕ್ಕೆ ಕುಕ್ಕರ್, ಕಲ್ಯಾಣಪುರದ ಪ್ಲಾನೆಟ್ ಮಾರ್ಸ್ ಫೌಂಡೇಶನ್ (ರಿ.) ಸಂಸ್ಥೆಯ ಮಕ್ಕಳಿಗೆ 35 ಜೊತೆ ಚಪ್ಪಲಿಯನ್ನು ಕೊಡುಗೆಯಾಗಿ ನೀಡಲಾಯಿತು. ವೇದಿಕೆಯಲ್ಲಿ ಸೀನಿಯರ್ ಚೇಂಬರ್ ರಾಷ್ಟ್ರೀಯ ಸಂಯೋಜಕ ಜಗದೀಶ್ ಕೆಮ್ಮಣ್ಣು, ಸ್ಥಾಪಕ ಅಧ್ಯಕ್ಷ ಉಮೇಶ್ ಅಮೀನ್, ಸೀನಿಯರೆಟ್ ಅಧ್ಯಕ್ಷೆ ರೋಹಿಣಿ ಉಮೇಶ್ ಅಮೀನ್, ಸೀನಿಯರೆಟ್ ಕಾರ್ಯದರ್ಶಿ ಜಯಶ್ರೀ ಹರೀಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ, ನಿರ್ದೇಶಕಿ ರಶ್ಮಿ ಸುರೇಶ್ ಅಮೀನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಿತ್ರ ಕುಮಾರ್ ವಂದಿಸಿದರು. ವಿಜಯ ಸುವರ್ಣ ಹಾಗೂ ವಿವೇಕ್ ಕಾರ್ಯಕ್ರಮ ನಿರೂಪಿಸಿದರು.