ಉಡುಪಿ:ಕರಾವಳಿಯಾದ್ಯಂತ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಂಡ ಸೂಪರ್ ಹಿಟ್ ಕನ್ನಡ ಚಲನ ಚಿತ್ರ ಇದೀಗ ಮಸ್ಕತ್ ಹಾಗೂ ಬಹರೈನ್ ನಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಲಿದೆ.
ಕರಾವಳಿ ಸೊಗಡಿನ ಈ ಚಿತ್ರವು ಅರೇಬಿಯನ್ ನೆಲದಲ್ಲಿ ಕನ್ನಡದ ಕಂಪನ್ನು ಚೆಲ್ಲಲು ವೇದಿಕೆ ಸಿದ್ಧವಾಗಿದೆ.ಮಸ್ಕತ್ ಕರ್ನಾಟಕ ಜಾನಪದ ಪರಿಷತ್ತು ನ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಹಾಗೂ ಬಹರೈನ್ ಕನ್ನಡ ಸಂಘಟನೆಯ ಅಜಿತ್ ಬಂಗೇರ ಕುರ್ಕಾಲು ಇವರ ಸಾರಥ್ಯದಲ್ಲಿ ಸೆಪ್ಟೆಂಬರ್ 19 ರಿಂದ ಸ್ಕೂಲ್ ಲೀಡರ್ ಚಿತ್ರವು ವಿದೇಶದಲ್ಲಿ ಪ್ರದರ್ಶನ ಕಾಣಲಿದೆ.
ಕರಾವಳಿ ಸೊಗಡಿನ ಈ ಚಿತ್ರವು ಅರೇಬಿಯನ್ ನೆಲದಲ್ಲಿ ಕನ್ನಡದ ಕಂಪನ್ನು ಚೆಲ್ಲಲು ವೇದಿಕೆ ಸಿದ್ಧವಾಗಿದೆ.ಪ್ರೇಕ್ಷಕರಿಂದ ಹಾಗೂ ಮಾಧ್ಯಮಗಳಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಿನಿಮಾವು ಇತ್ತೀಚೆಗೆ ಚೆನ್ನೈ ನಲ್ಲಿ ನಡೆದ ಮೋಕ್ಕೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ಬಾಚಿಕೊಂಡಿರುವುದು ಚಿತ್ರದ ಹೆಗ್ಗಳಿಕೆ.
ಚಿತ್ರ ತಂಡವು ಇದೀಗ ಮಸ್ಕತ್ ಗೆ ಪ್ರಯಾಣ ಬೆಳೆಸಿದ್ದು ಮುಂದಿನ ದಿನಗಳಲ್ಲಿ ದುಬೈ ಹಾಗೂ ಯು ಎಸ್ ಎ ದೇಶಗಳಲ್ಲಿ ಬಿಡುಗಡೆಯಾಗಲಿದೆಯೆಂದು ನಿರ್ಮಾಪಕಕೆ. ಸತ್ಯೇಂದ್ರ ಪೈ ತಿಳಿಸಿದ್ದಾರೆ.

ರಾಜ್ಯಪ್ರಶಸ್ತಿ ವಿಜೇತ ರಜಾಕ್ ಪುತ್ತೂರು ನಿರ್ದೇಶನ, ಮೋಹನ್ ಪಡ್ರೆ ಯವರ ಛಾಯಾಗ್ರಹಣ,ಸಂಗೀತ ಜಯಕಾರ್ತಿ, ಅಕ್ಷತ್ ವಿಟ್ಲ ಸಹನಿರ್ದೇಶನದ, ಈ ಚಿತ್ರದಲ್ಲಿ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ, ರಮೇಶ್ ಭಟ್,ನಾಗೇಶ್ ಕಾಮತ್ ಕಟಪಾಡಿ,ಸುದರ್ಶನ್ ಪುತ್ತೂರು, ದೀಕ್ಷಾ ರೈ, ಶ್ರೀಜಯ್, ದೃಶ ಕೊಡಗು, ತನ್ಮಯ್ ,ಯಶಸ್ ಪಿ.ಸುವರ್ಣ ಸೇರಿದಂತೆ 120 ಮಂದಿ ಹೈಸ್ಕೂಲ್ ಮಕ್ಕಳು ನಟಿಸಿದ್ದಾರೆ. ಇದು ಸಂಪೂರ್ಣವಾಗಿ ಕಟಪಾಡಿಯ ಎಸ್ ವಿ ಎಸ್ ಶಾಲೆಯಲ್ಲಿ ಚಿತ್ರೀಕರಣಗೊಂಡಿದೆ.












