ಉಡುಪಿ: ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ವತಿಯಿಂದ ಕೊರೊನಾ ಲಾಕ್ ಡೌನ್ ನಿಂದ ನಿರಾಶ್ರಿತರಾದ ಉಡುಪಿ ನಗರದ ಕುಟುಂಬಗಳಿಗೆ ಸುಮಾರು 800 ಕೆಜಿ ತರಕಾರಿ ಕಿಟ್ ಗಳನ್ನು ಸೋಮವಾರ ವಿತರಣೆ ಮಾಡಲಾಯಿತು.
ಶಾಸಕ ಕೆ. ರಘುಪತಿ ಭಟ್ ಉಡುಪಿ ನಗರ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಪ್ರದಾನ ಕಾರ್ಯದರ್ಶಿ ದಿನೇಶ್ ಅಮೀನ್, ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ಸುಶಾಂತ್ ಕುಮಾರ್, ಕಾರ್ಯದರ್ಶಿಗಳಾದ ಪ್ರಜಿತ್ ಕಲ್ಮಾಡಿ, ವಿನಾಯಕ್ ಶೇಟ್, ಯೋಗೀಶ್ ದೇವಾಡಿಗ, ಚಂದ್ರಶೇಖರ್ ಪ್ರಭು ಹಾಜರಿದ್ದರು.












