ಇಂದು ಚಾಯ್ಸ್ ಫರ್ನಿಚರ್ ಮಳಿಗೆ ಉದ್ಘಾಟನೆ 

ಉಡುಪಿ: ಉಡುಪಿ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ ಬಳಿಯ ಎಕ್ತಾ ಹೈಟ್ಸ್ ನ ನೆಲಮಹಡಿಯಲ್ಲಿ ನೂತನವಾಗಿ ತೆರೆಯಲಾದ ಚಾಯ್ಸ್ ಫರ್ನಿಚರ್ ಮಳಿಗೆಯ ಉದ್ಘಾಟನ ಸಮಾರಂಭವು ಜ. 26ರಂದು ಸಂಜೆ  4ಕ್ಕೆ ನಡೆಯಲಿದೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಸಂತೆಕಟ್ಟೆ ಮೌಂಟ್ ರೋಸರಿ ದೇವಾಲಯದ ಧರ್ಮಗುರು ವ| ಡಾ| ಲೆಸ್ಲಿಡಿ’ಸೋಜಾ, ತೊಟ್ಟಂ ಸಂತ ಅನ್ನಾ ಮಾತೆಯ ದೇವಾಲಯದ ಧರ್ಮಗುರು ವ| ಫಾ| ಫ್ರಾನ್ಸಿಸ್ ಕರ್ನೇಲಿಯೋ ಆಶೀರ್ವಚನ ನೀಡಲಿದ್ದಾರೆ. ಸಂತೆಕಟ್ಟೆ ಮೌಂಟ್ ರೋಸರಿ ದೇವಾಲಯದ ಪಾಲನಾ ಮಂಡಳಿ ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ಡಯಾಸ್, ಮಾಂಡವಿ ಬಿಲ್ಡರ್ಸ್ ನ ಗ್ಲೆನ್ ಡಯಾಸ್,  ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಮೇಶ್ ಶೆಟ್ಟಿ, ಮ.ಕಾಂ. ನಾಯಕಿ ವೇರೋನಿಕಾ ಕರ್ನೇಲಿಯೋ ಉಪಸ್ಥಿತರಿರುವರು.
ಅಪಾರ ಸಂಗ್ರಹ:
ಚಾಯ್ಸ್ ಫರ್ನಿಚರ್ ಮಳಿಗೆಯಲ್ಲಿ ವಿಶೇಷವಾಗಿ ಮನೆ, ಕಚೇರಿಗಳಿಗೆ ಬೇಕಾಗುವ ಎಲ್ಲಾ ತರಹದ ವಿನೂತನ ಮಾದರಿಯ ಮರದ ಫರ್ನಿಚರ್ ಗಳು, ಚೆಯರ್ ಟೇಬಲ್, ಟಿವಿ ಯೂನಿಟ್, ಸೋಫಾ ಸೆಟ್, ಬೆಡ್ ರೂಂ ಫರ್ನಿಚರ್ ಸೆಟ್, ಕಿಚನ್ ರೂಂ ಫರ್ನಿಚರ್ ಸೆಟ್, ಸ್ಟೀಲ್ ಕಪಾಟು, ಎಕ್ಸ್ ಕ್ಲ್ಯೂಸಿವ್ ಡೈನಿಂಗ್ ಟೇಬಲ್ ಸೆಟ್,  ದಿವಾನ ಸೆಟ್, ಪ್ಲಾಸ್ಟಿಕ್ ಮೌಲ್ಡೆಡ್ ಫರ್ನಿಚರ್, ಮ್ಯಾಟ್ರೆಸ್, ಕರ್ಟನ್ ಫರ್ನಿಶಿಂಗ್, ಬೆಡ್ ಶೀಟ್ಸ್, ದಿಂಬು ಮೊದಲಾದ ಪೀಠೋಪಕರಣಗಳ ಅಪಾರ ಸಂಗ್ರಹವಿದೆ.
ಗ್ರಾಹಕರ ಅನುಕೂಲತೆಗೆ ತಕ್ಕಂತೆ ಆರ್ಡರ್ ಗಳನ್ನು ಸ್ವೀಕರಿಸಿ ಪೀಠೋಪಕರಣಗಳನ್ನು ಆಧುನಿಕ ಶೈಲಿಯಲ್ಲಿ, ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡಲಾಗುವುದು. ವಿವಿಧ ಆಕರ್ಷಕ ಫರ್ನಿಚರ್ ಗಳ ಅಪಾರ ದಾಸ್ತಾನು ಹೊಂದಿರುವ ಈ ಮಳಿಗೆಯು ಗ್ರಾಹಕರಿಗೆ ಉಚಿತವಾಗಿ ಡೆಲಿವರಿ ಕೊಡಲಿದೆ. ಚಾಯ್ಸ್ ಫರ್ನಿಚರ್ ಉದ್ಘಾಟನೆ ಪ್ರಯುಕ್ತ ಜನವರಿ 26 ರಿಂದ ಫೆಬ್ರವರಿ 15ರ ತನಕ ಶೇ. 15 ಆಫರ್ ನೀಡಲಾಗುವುದೆಂದು ಮಳಿಗೆಯ ಮಾಲಕ ಪಾಸ್ಕಲ್ ಕುಲಾಸೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.