ಉಡುಪಿ ಸಂಸ್ಕ್ರತ ಕಾಲೇಜಿನ ವಿದ್ಯಾರ್ಥಿಗೆ ಸಂಸ್ಕ್ರತ ಭಾಷಣ ಸ್ಪರ್ಧೆಯಲ್ಲಿ ಸ್ವರ್ಣ ಪದಕ 

ಉಡುಪಿ: ಸಂಸ್ಕೃತ ಭಾರತೀ ಹಾಗೂ ತರುಣೋದಯ ಸಂಸ್ಕ್ರತ ಸೇವಾ ಸಂಸ್ಥೆಯ ಜಂಟಿ ಆಯೋಜನೆಯಲ್ಲಿ 29ನೇ ವರ್ಷದ ಕರ್ನಾಟಕ ರಾಜ್ಯಸ್ತರೀಯ ಸಂಸ್ಕ್ರತ ಭಾಷಣ ಸ್ಪರ್ಧೆ ಶಿವಮೊಗ್ಗದ ಸಂಸ್ಕ್ರತ ಭವನದಲ್ಲಿ ನಡೆಯಿತು.
ನೂತನ ರಾಷ್ಟ್ರೀಯ ಶಿಕ್ಷಣ-ನೀತೌ ಸಂಸ್ಕ್ರತಸ್ಯ ಪ್ರಾಸಂಗಿಕತಾಃ” ವಿಷಯದಲ್ಲಿ ಭಾಷಣ ನೀಡಿದ ಉಡುಪಿ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧ ಸಂಸ್ಕ್ರತ ಮಹಾ ವಿದ್ಯಾಯಲಯದ ಜೋತಿಷ್ಯ ಆಚಾರ್ಯ-1 ತರಗತಿಯ ವಿದ್ಯಾರ್ಥಿ ‘ರಾಹುಲ ಮಿಶ್ರಾ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಹುಲ ಮಿಶ್ರಾ ಅವರು ಒಡಿಶಾ ರಾಜ್ಯದ ಬರಗಡ ಜಿಲ್ಲೆಯವರಾಗಿದ್ದು, ಉಡುಪಿಯ ಸಂಸ್ಕ್ರತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಹೊರ ರಾಜ್ಯದ ವಿದ್ಯಾರ್ಥಿಯಾಗಿ ಕಾಲೇಜಿಗೆ ಗೌರವವನ್ನು ತಂದಿದ್ದಾರೆ.