ಉಡುಪಿ:ಸಾಲಿಗ್ರಾಮ ಪ.ಪಂ: ಸಲಹೆ ಸೂಚನೆ ಆಹ್ವಾನ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ಘನತ್ಯಾಜ್ಯ ನಿರ್ವಹಣೆಯಲ್ಲಿ ವಾರ್ಡುಗಳ ಸ್ವಚ್ಛತೆ, ವಾಣಿಜ್ಯ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು, ಘನತ್ಯಾಜ್ಯ ನಿರ್ವಹಣೆ ನಿಯಮ 2016, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 2016 ಹಾಗೂ ನಿಯಮ 2016 ರ ರೀತ್ಯಾ ಕ್ರಮವಹಿಸಲಾಗುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಪಟ್ಟಣ ಪಂಚಾಯತ್ ಅನ್ನು (ಜಿ.ಎಫ್.ಸಿ, ಓ.ಡಿ.ಎಫ್ +) ತ್ಯಾಜ್ಯ ಮುಕ್ತ ನಗರಗೊಳಿಸುವಲ್ಲಿ ಪಟ್ಟಣ ಪಂಚಾಯತ್ ಸಾಲಿಗ್ರಾಮವು ಸಹಕಾರ ಹಾಗೂ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿರುತ್ತದೆ.

ಸಾಲಿಗ್ರಾಮ ನಗರಕ್ಕೆ ಜಿ.ಎಫ್.ಸಿ ಮೂರು ಸ್ಟಾರ್ ಮತ್ತು ಓ.ಡಿ.ಎಫ್ + ನಗರವೆಂದು ಘೋಷಿಸುವ ಸಲುವಾಗಿ ಸಾರ್ವಜನಿಕರು ಸಲಹೆ, ಸೂಚನೆಗಳು ಇದ್ದಲ್ಲಿ ಏಳು ದಿನಗಳ ಒಳಗಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಗೆ ಲಿಖಿತ ಹಾಗೂ ಮೌಖಿಕವಾಗಿ ತಿಳಿಸಬಹುದಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.