ಉಡುಪಿ: ಸಾಸ್ತಾನದಲ್ಲಿ ದೋಣಿ ದುರಂತ; ಓರ್ವ ಮೀನುಗಾರ ಮೃತ್ಯು

ಕೋಟ: ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು, ಅದರಲ್ಲಿದ್ದ ಓರ್ವ ಮೀನುಗಾರ ಮೃತಪಟ್ಟು, ಇಬ್ಬರು ಪ್ರಾಣಪಾಯದಿಂದ ಪಾರಾದ ಘಟನೆ ಸಾಸ್ತಾನದ ಕೋಡಿತಲೆ ಅಳಿವೆ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಶರತ್ ಖಾರ್ವಿ (27) ಮೃತಪಟ್ಟ ಮೀನುಗಾರ. ಶುಕ್ರವಾರ ಬೆಳಿಗ್ಗೆ ಶಂಕರ್ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಅಕ್ಷಯ ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ಶರತ್ ಖಾರ್ವಿ ಈ ಮೂವರು ಮೀನುಗಾರರು ಮೀನುಗಾರಿಕೆ ತೆರಳಿದ್ದರು. ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೂವರು ನೀರುಪಾಲಗಿದ್ದರು.

ಅದೃಷ್ಠವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದ ಮಂಜುನಾಥ್ ಖಾರ್ವಿ, ಅಕ್ಷಯ್ ಖಾರ್ವಿ ಇಬ್ಬರು ಮೀನುಗಾರರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೋಣಿ ಸಮುದ್ರ ಪಾಲಾಗಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ ಎನ್ನಲಾಗಿದೆ. ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.