ಉಡುಪಿ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ‌ ಆಪರೇಟಿವ್ ಸೊಸೈಟಿನಿಂದ ಆಶಾ ನಿಲಯದ ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ

ಉಡುಪಿ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ‌ ಆಪರೇಟಿವ್ ಸೊಸೈಟಿ ವತಿಯಿಂದ ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ ಸಮಾರಂಭವು ಉಡುಪಿ ಮಿಷನ್ ಕಂಪೌಂಡ್ ನ ಆಶಾ ನಿಲಯದ ಸಭಾಂಗಣದಲ್ಲಿ ನಡೆಯಿತು.

ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ‌ ಆಪರೇಟಿವ್ ಸೊಸೈಟಿಯು ಬಹಳಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ.ಜನ ಸಾಮಾನ್ಯರ ಸೊಸೈಟಿ.ಆಶಾ ನಿಲಯದ ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ‌ ಮಾದರಿ ಸೊಸೈಟಿ ಎನಿಸಿಕೊಂಡಿದೆ. ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರವು ಶಕ್ತಿ‌ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಶೋಕಾ ಮಾತಾ ಇಗರ್ಜಿಯ ಧರ್ಮಗುರು ರೆ.ಫಾ. ಚಾರ್ಲ್ಸ್ ಮಿನೇಜಸ್ ಮಾತನಾಡಿ, ವಿಶೇಷ ಮಕ್ಕಳ ಆರೈಕೆ ಮಾಡಿ ಅವರಿಗೆ ವಿದ್ಯಾಭ್ಯಾಸ ನೀಡುವುದು ಪವಿತ್ರವಾದ ಕಾರ್ಯ. ಅದೊಂದು ಅನನ್ಯವಾದ ಸೇವೆ. ಸೈಂಟ್ ಮಿಲಾಗ್ರಿಸ್ ಸೊಸೈಟಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಗ್ರಾಹಕರಾದ ಅಲ್ಪೊನ್ಸೋ ಡಿಕೋಸ್ಟ ಹಾಗೂ ಕೃಷ್ಣಬಾಬು ರಾವ್, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ‌ ಆಪರೇಟಿವ್ ಸೊಸೈಟಿಯ ಅಭಿವೃದ್ಧಿ ಅಧಿಕಾರಿ ಮನೀಶ್, ಉಡುಪಿ ಶಾಖಾ ವ್ಯವಸ್ಥಾಪಕಿ ಪ್ರಮೀಳಾ ಲೋಬೊ, ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ, ಉಡುಪಿ ಶಾಖೆ ಯ ಸಿಬ್ಬಂದಿಗಳಾದ ಸಂದೇಶ್, ನಿಶಿತ್,ಅಜಯಶೆಟ್ಟಿ, ಶಶಾಂಕ್, ರೋಶನ್ ಮೆಂಡೋನ್ಸ,ಧನುಷ್, ಜಯಶ್ರೀ ಪ್ರಭು, ಸುವಿದ, ಜಾಸ್ಮಿನ್, ಹಾಗೂ ಆಶಾ ನಿಲಯದ ಮುಖ್ಯೋಪಾಧ್ಯಾಯಿನಿ ಯುನಿಸ್ ಕ್ರಿಶ್ಟಬೇಲ್ ವಾರ್ಡನ್ ದಿವ್ಯಜ್ಯೋತಿ ಉಪಸ್ಥಿತರಿದ್ದರು.