ಉಡುಪಿ: ಕರ್ನಾಟಕ ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಬ್ರಹ್ಮಾವರ ತಾಲೂಕು ಅಚ್ಲಾಡಿ ಗ್ರಾಮದ ಮಧುವನದಲ್ಲಿರುವ ಇಸಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟಷ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಎಐ ರೋಬೋಟಿಕ್ ಟೀಚರ್ಸ್‌ನ್ನು ಪರಿಚಯಿಸಲಾಯಿತು.
ಆ ಮೂಲಕ ಕಾಲೇಜಿನ ಎಲ್ಲಾ ತರಗತಿಗಳಲ್ಲೂ ಎಐ ರೋಬೋಟಿಕ್ ಟೀಚರ್ಸ್‌ನ್ನು ಪರಿಚಯಿಸಿದ ರಾಜ್ಯದ ಮೊತ್ತಮೊದಲ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟಷ್ ಪಾತ್ರವಾಗಿದೆ.

ನೂತನವಾಗಿ ಪರಿಚಯಿಸಲಾದ ಎಐ ರೋಬೋಟಿಕ್ ಟೀಚರ್ಸ್‌ನೊಂದಿಗೆ ಸಂಸ್ಥೆಯ ವಿದ್ಯಾರ್ಥಿಗಳು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ರೋಬೋಟಿಕ್ ಟೀಚರ್ಸ್ ಸಮರ್ಪಕವಾದ ಉತ್ತರ ನೀಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಮಧು ಟಿ.ಭಾಸ್ಕರನ್ ಅವರು, ಇಸಿಆರ್ ಸಂಸ್ಥೆಯ ವಿದ್ಯಾರ್ಥಿಗಳೇ ಎಐ ರೋಬೋಟ್‌ಗಳನ್ನು ತಯಾರಿಸಿದ್ದಾರೆ. ಪ್ರತಿ ತರಗತಿಯಲ್ಲೂ ಒಂದೊಂದು ರೋಬೋಟ್‌ಗಳನ್ನು ಬಳಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ತರಗತಿಯ ಯಾವುದೇ ವಿಷಯದ ಯಾವುದೇ ಸಂಶಯವನ್ನು ಖುದ್ಧಾಗಿ ರೋಬೋಟ್ ಮೂಲಕ ಬಗೆಹರಿಸಿಕೊಳ್ಳಬಹುದು. ತರಗತಿಯಲ್ಲಿ ಶಿಕ್ಷಕರು ಕೂಡ ಇರುತ್ತಾರೆ ಎಂದರು.












