ಉಡುಪಿ ಶ್ರೀ ಅನಂತೇಶ್ವರ ಚಂದ್ರಮೌಳೇಶ್ವರ ದೇವಾಲಯದಲ್ಲಿ ರಾಶಿ ಪೂಜೆ ಸಂಪನ್ನ

ಉಡುಪಿ: ಉಡುಪಿಯ ಶ್ರೀ ಅನಂತೇಶ್ವರ ಚಂದ್ರಮೌಳೇಶ್ವರ ದೇವಾಲಯದಲ್ಲಿ ರಾಶಿ ಪೂಜೆಯ ಅಂಗವಾಗಿ ಅಷ್ಟಾವಧಾನ ಸೇವೆಯು ನಡೆಯಿತು. ಇದರ ಅಂಗವಾಗಿ ಹೂವಿನ ತೊಟ್ಟಿಲಲ್ಲಿ ಉಭಯ ದೇವರ ಉತ್ಸವ ಮೂರ್ತಿಯನ್ನಿಟ್ಟು ತೊಟ್ಟಿಲು ಪೂಜೆಯನ್ನು ಮಾಡಲಾಯಿತು. ನಂತರ ಅಷ್ಟಾವಧಾನ ಸೇವೆಯಲ್ಲಿ ವೇದ, ಪುರಾಣ, ಜ್ಯೋತಿಷ್ಯ, ಸಂಗೀತ, ನೃತ್ಯ, ಸರ್ವವಾದ್ಯ ಸೇವೆಗಳು ಸಮರ್ಪಿತಗೊಂಡಿತು.

ಇಂದು ಬೆಳಿಗ್ಗೆ ವೃಶ್ಚಿಕ ಲಗ್ನದಲ್ಲಿ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಾಶಿಪೂಜೆಯು ಸಂಪನ್ನಗೊಂಡಿತು.