ಉಡುಪಿ: ಅಷ್ಟಮಿಯ ಪ್ರಯುಕ್ತ ಹುಲಿವೇಷ ಹಾಕಿ ಕುಣಿಯುತ್ತಿದ್ದ ಅಕ್ಷಯ್ ಶೇಟ್ ಗುಂಡಿಬೈಲ್ ಅವರಿಗೆ ಅಚ್ಚರಿಯ ಘಟನೆ ಎದುರಾಯಿತು. ಹುಲಿ ಕುಣಿಯುತ್ತಿದ್ದ ಮಧ್ಯದಲ್ಲೇ ಅವರಿಗೆ ಹಾವು ಬಂದಿರುವ ಬಗ್ಗೆ ತುರ್ತು ಕರೆ ಬಂದಿತ್ತು.
ವೃತ್ತಿಯಲ್ಲಿ ಐಟಿ ಪ್ರೊಫೆಷನಲ್ ಆಗಿದ್ದರೂ, ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಬಿಡುವಲ್ಲಿ ಪರಿಣತಿ ಹೊಂದಿರುವ ಅಕ್ಷಯ್ ಶೇಟ್ ಅವರು ತಮ್ಮ ಜನಪದ ಹುಲಿ ವೇಷ ಬದಲಾಯಿಸದೆ ನೇರವಾಗಿ ಸ್ಥಳಕ್ಕೇ ಧಾವಿಸಿದರು. ಕೆಲವೇ ಕ್ಷಣಗಳಲ್ಲಿ ಹಾವನ್ನು ಹಿಡಿದು ಸುರಕ್ಷಿತವಾಗಿ ಪ್ರಕೃತಿಗೆ ಬಿಟ್ಟರು.
ಜನಪದ ಕಲೆ, ವೃತ್ತಿಜೀವನ ಹಾಗೂ ಸಾಹಸ—ಮೂರನ್ನೂ ಸಮನ್ವಯಗೊಳಿಸಿರುವ ಅಕ್ಷಯ್ ಶೇಟ್ ಅವರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.












