ಉಡುಪಿ: ಬಾವಿಗೆ ಬಿದ್ದ ಮೂರು ಕುರಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಉಡುಪಿ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಮೀಪ ಇಂದು ಸಂಜೆ ನಡೆದಿದೆ.
ಇಲ್ಲಿನ ಮನೆಯೊಂದರ ಬಾವಿಯಲ್ಲಿ ಮೂರು ಕುರಿಗಳು ಬಾವಿಗೆ ಬಿದ್ದಿದ್ದು, ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕದ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸುಧಾಕರ್ ಹಗ್ಗದ ಸಹಾಯದಿಂದ ಬಾವಿಗಿಳಿದು, ಅಗ್ನಿಶಾಮಕದಳದ ಸಿಬ್ಬಂದಿಯ ಸಹಕಾರದೊಂದಿಗೆ ಮೂರು ಕುರಿಗಳನ್ನು ರಕ್ಷಣೆ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಉಡುಪಿ ಜಿಲ್ಲಾ ಅಧಿಕಾರಿ ವಸಂತ್ ಕುಮಾರ್, ಠಾಣಾಧಿಕಾರಿ ಸತೀಶ್, ಸಹಾಯಕ ಠಾಣಾಧಿಕಾರಿ ಮೀರ್ ಮಹಮ್ಮದ್ ಗೌಸ್, ಲೀಡಿಂಗ್ ಫೈಯರ್ ಮ್ಯಾನ್ ಅಶ್ವಿನ್ ಸನಿಲ್, ಚಾಲಕ ಶಂಕರ್ ದಾಸ್, ಸಿಬ್ಬಂದಿಗಳಾದ ಉಮೇಶ್, ಸುಧಾಕರ್ ಹಾಗೂ ಹೋಮ್ ಗಾರ್ಡ್ ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದರು.