ಉಡುಪಿ: ಉಡುಪಿ ನಗರದ ಸಮ್ಮರ್ ಪಾರ್ಕ್ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಿಳಾ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಆರೋಪಿ ಶರತ್ ಯಾನೆ ಮೊಹಮ್ಮದ್ ಪಯಾಜ್ ಎಂಬವನ ಮೇಲೆ ಪ್ರಕರಣ ದಾಖಲಾಗಿದೆ. ಹೋಟೆಲ್ ರೂಮ್ ನಂಬ್ರ 308ಕ್ಕೆ ದಾಳಿ ನಡೆಸಿದ ಪೊಲೀಸರು, ರೂಮ್ ನಲ್ಲಿದ್ದ ಒಬ್ಬ ಮಹಿಳೆಯನ್ನು ವಿಚಾರಿಸಿದ್ದಾರೆ.
ಈ ವೇಳೆ ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂಬಾತ ಕೆಲಸ ಕೊಡಿಸುವುದಾಗಿ ಆಗಸ್ಟ್ 19 ರಂದು ವ್ಯಕ್ತಿ ನೊಂದ ಮಹಿಳೆಯನ್ನು ಉಡುಪಿಗೆ ಕರೆಸಿಕೊಂಡು ರೂಮ್‌ನ್ನು ಬುಕ್ ಮಾಡಿಸಿಕೊಟ್ಟು ವೇಶ್ಯಾವಾಟಿಕೆ ದಂಧೆ ನಡೆಸಿ, ಅಕ್ರಮ ಲಾಭ ಪಡೆಯುವ ಉದ್ದೇಶ ಹೊಂದಿದ್ದ ಎಂದು ತಿಳಿದುಬಂದಿದೆ.












