ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಹಾಗೂ ಖಾಲಿ ನಿವೇಶನ ಮಾಲೀಕರು ಹಾಗೂ ಅಧಿಭೋಗದಾರರಿಗೆ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಶೇ.3 ರಷ್ಟು ಹೆಚ್ಚಿಸಲಾಗಿದ್ದು, ಏಪ್ರಿಲ್ 1 ರಿಂದ 30 ರ ಒಳಗೆ ಪಾವತಿಸಿದ್ದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು.
ಮೇ 1 ರಿಂದ ಜೂನ್ 30 ರ ಒಳಗೆ ಪಾವತಿಸಿದ್ದಲ್ಲಿ ದಂಡ ರಹಿತವಾಗಿ ಪಾವತಿಸಲು ಅವಕಾಶವಿದ್ದು, ಜುಲೈ 1 ರ ನಂತರ ಪಾವತಿಸುವವರಿಗೆ ಆಸ್ತಿ ತೆರಿಗೆಯ ಮೇಲೆ ಪ್ರತಿ ತಿಂಗಳು ಶೇ.2 ರಷ್ಟು ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.