ಪ್ರೈಮ್ ಉಡುಪಿ : ಐ.ಬಿ.ಪಿ.ಎಸ್. ಬ್ಯಾಂಕಿಂಗ್  ಪರೀಕ್ಷೆಗೆ ದೈನಂದಿನ ತರಬೇತಿ

ಉಡುಪಿ: ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಉಡುಪಿಯ ಪ್ರೈಮ್ ಸಂಸ್ಥೆ ಇದೀಗ ಮುಂದೆ ಪ್ರಕಟಣೆಗೊಳ್ಳಲಿರುವ ಐ.ಬಿ.ಪಿ.ಎಸ್ ಆಫೀಸರ್ಸ್ ಮತ್ತು ಕ್ಲರಿಕಲ್ ನೇಮಕಾತಿ ಪರೀಕ್ಷೆಗಳಿಗೆ ಅನುಭವೀ ಉಪನ್ಯಾಸಕರುಗಳ ನೇತೃತ್ವದಲ್ಲಿ ಇದೇ ಬರುವ ಆಗಸ್ಟ್ 18ರಿಂದ ನೂತನ ದೈನಂದಿನ ತರಬೇತಿ ತರಗತಿಗಳನ್ನು ಉಡುಪಿ ಬ್ರಹ್ಮಗಿರಿ ಬಳಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳಿಸಲಿದೆ.
ಎರಡು ಬ್ಯಾಚ್ ಗಳಲ್ಲಿ ಪ್ರಾರಂಭಗೊಂಡ ಈ ತರಬೇತಿ ವೀಕಂಡ್ ಬ್ಯಾಚ್ ಆಗಸ್ಟ್ 3 ರಂದು ಕರಾವಳಿ ಬೈಪಾಸ್ ಬಳಿಯ ಪ್ರೈಮ್ ಕೇಂದ್ರದಲ್ಲಿ ಪಾರಂಭಗೊಂಡಿದ್ದು ಎರಡನೇ (ದೈನಂದಿನ) ಬ್ಯಾಚ್ ಇದೇ ಬರುವ ಆಗಸ್ಟ್ 18 ರಿಂದ ಪ್ರತೀ ಸೋಮವಾರದಿಂದ ಶನಿವಾರ ಸಂಜೆ 5ರಿಂದ 6.30ರ ವರೆಗೆ ಮತ್ತು ಪ್ರತೀ ಭಾನುವಾರ ಸಂಜೆ 3.30-6.30 ವರೆಗೆ ನಡೆಯಲಿದ್ದು ಡಿಸೆಂಬರ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.
200 ಗಂಟೆಗಳ ಈ ತರಬೇತಿ ಬ್ಯಾಂಕಿಂಗ್ ಪರೀಕ್ಷೆಯ ಪಠ್ಯಕ್ರಮಗಳಿಗನುಗುಣವಾಗಿ ಮೊದಲನೇ ಹಂತ (ಪ್ರಿಲಿಮಿನರಿ) ಪರೀಕ್ಷೆಯ ರೀಸನಿಂಗ್, ಮ್ಯಾಥ್ಸ್, ಇಂಗ್ಲೀಷ್ ಹಾಗೂ ಎರಡನೇ ಹಂತದ (ಮೈನ್ಸ್) ಪರೀಕ್ಷೆಯ ರೀಸನಿಂಗ್, ಮ್ಯಾಥ್ಸ್, ಜನರಲ್ ನಾಲೇಜ್, ಇಂಗ್ಲೀಷ್ ಹಾಗೂ ಕಂಪ್ಯೂಟರ್ ತರಬೇತಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸವಾಲಾಗಿರುವ ಮ್ಯಾಥ್ಸ್, ರೀಸನಿಂಗ್ ವಿಭಾಗದ ಪ್ರಶ್ನಾವಳಿಗಳನ್ನು ಸೂಕ್ತವಾಗಿ ನಿಭಾಯಿಸಲು ಮತ್ತು ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಶ್ನೆಗಳನ್ನು ಉತ್ತರಿಸಲು ಸಹಕರಿಸುವ ವೇದಗಣಿತದ ಶಾರ್ಟ್ ಕಟ್ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತರಗತಿಗಳು ನಡೆಯಲಿದೆ.
ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಅಂತಿಮ ಹಂತದ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಬಾಗವಹಿಸಿ ಮುಂದೆ ಬರಲಿರುವ ಬ್ಯಾಂಕಿಂಗ್ ಪರೀಕ್ಷೆ ಮಾತ್ರವಲ್ಲದೆ ಇನ್ನಿತರ ಆಪ್ಟಿಟ್ಯೂಡ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಾದ ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ ಮುಂತಾದ ಪರೀಕ್ಷೆಗಳಿಗೂ ತಯಾರಿ ನಡೆಸಬಹುದಾಗಿದೆ.
ಸಂಸ್ಥೆಯು ಈ ತರಬೇತಿಯಲ್ಲಿ ಉತ್ತಮ ಶಿಕ್ಷಕ ವ್ರಂದ, ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ, ಕಂಫ್ಯೂಟರ್, ಅಂತರ್ಜಾಲ, ಅನ್ ಲೈನ್ ಪರೀಕ್ಷೆಗೆ ಪವರ್ ಪಾಯಿಂಟ್ ತರಬೇತಿ, ಮಾದರಿ ಪರೀಕ್ಷೆ ಜೊತೆಗೆ ಅಭ್ಯರ್ಥಿಗಳಿಗೆ ಬೇಸಿಕ್ ಮತ್ತು ಅಡ್ವಾನ್ಸ್ ಸ್ಟಡಿ ಬುಕ್ಸ್, 1 ವರ್ಷ ಅವಧಿಯ ಆನ್ ಲೈನ್ ಮೊಕ್ ಟೆಸ್ಟ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶನ ಇವು ಸಂಸ್ಥೆಯ ವಿಶೇಷತೆ.
ಐ.ಬಿ.ಪಿ.ಎಸ್ ಪಿ.ಓ. ಹುದ್ದೆಗೆ ೨೦ ರಿಂದ ೩೦ ವರ್ಷ ತುಂಬಿದ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ಆಗಸ್ಟ್ 28ರ ಒಳಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಇದೇ ಬರುವ ಆಗಸ್ಟ್ 18ರಿಂದ ಆರಂಭಗೊಳ್ಳಲಿರುವ ಬ್ಯಾಂಕಿಂಗ್ ನೇಮಕಾತಿ ಪರೀಕ್ಷಾ ತರಬೇತಿಯ ಡೈಲಿ ಇವ್ನಿಂಗ್ ಬ್ಯಾಚ್ ಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಸಮೀಪ ಬ್ರಹ್ಮಗಿರಿ ಕೇಂದ್ರ, ಉಡುಪಿ (0820-4293422, mob:9243313632) ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರ ಪ್ರಕಟನೆ ತಿಳಿಸಿದೆ.