ಪ್ರೈಮ್: ಬ್ಯಾಂಕಿಂಗ್ ನೇಮಕಾತಿ ಮಾದರಿ ಸಂದರ್ಶನ ಕಮ್ಮಟ

ಉಡುಪಿ: ಪ್ರೈಮ್ ಸಂಸ್ಥೆಯು ಕರ್ಣಾಟಕ ಬ್ಯಾಂಕ್ ಕ್ಲರಿಕಲ್ ವಿಭಾಗದಲ್ಲಿ ನಡೆಸಿದ  ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ  ಪ್ರೈಮ್ ಸಂಸ್ಥೆಯ  33 ಅಭ್ಯರ್ಥಿಗಳಿಗೆ ಮುಂದಿನ ಹಂತದ  ವೈಯಕ್ತಿಕ ಸಂದರ್ಶನ ಪರೀಕ್ಷೆಯನ್ನು ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಎದುರಿಸಲು ಬೇಕಾದ ಮಾರ್ಗದರ್ಶನ ಕಾರ್ಯಾಗಾರ ಕಾರ್ಯಕ್ರಮ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಏರ್ಪಡಿಸಲಾಯಿತು.

ಕಾರ್ಯಕ್ರಮಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಗಳಾಗಿ ಗುರುಪ್ರಸಾದ್, ಶೈಲೇಸ್, ಎ.ಪಿ.ಭಟ್ ಭಾಗವಹಿಸಿ, ಸಂದರ್ಶನದಲ್ಲಿ ಯಶಸ್ಸು ಗಳಿಸಲು ನೆರವಾಗುವ ಕೌಶಲಗಳ ವಿವರ ಹಾಗೂ ಯಶಸ್ವೀ ಸಂದರ್ಶನದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಪ್ರತೀ ಅಭ್ಯರ್ಥಿಗಳಿಗೂ 30ನಿಮಿಷದ ಮೋಕ್ಇಂಟರ್ವ್ಯೂ ನಡೆಸಲಾಯಿತು.

ಸಂಸ್ಥೆಯಲ್ಲಿ ಈವರೆಗೆ ತರಬೇತಿ ಪಡೆದ 1280 ಕ್ಕೂ ಹೆಚ್ಚು ಅಭ್ಯರ್ಥಿಗಳು ಬ್ಯಾಂಕಿಂಗ್ ಹಾಗೂ  ಇನ್ನಿತರ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಸಂಸ್ಥೆಯ ಹೆಮ್ಮೆ. ಪ್ರಸ್ತುತ ಬ್ಯಾಂಕಿಂಗ್ ತರಬೇತಿ ಆರಂಭಗೊಂಡಿದ್ದು, ಮುಂಬರುವ ಐಬಿಪಿಎಸ್, ನೇಮಕಾತಿ ಪರೀಕ್ಷೆಗಳಿಗೆ ಅನುಭವೀ ಉಪನ್ಯಾಸಕರುಗಳ ನೇತ್ರತ್ವದಲ್ಲಿ ಆಗಸ್ಟ್25 ರಿಂದ ನೂತನ ದೈನಂದಿನ ಬ್ಯಾಚ್ ಆರಂಭಗೊಳ್ಳಲಿದೆ.ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ ಕೇಂದ್ರ, ಉಡುಪಿ ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.