ಉಡುಪಿ ಪ್ರೈಮ್ ಸಂಸ್ಥೆಯಿಂದ ಬ್ಯಾಂಕಿಂಗ್‌ ನೇಮಕಾತಿ ಹುದ್ದೆಗೆ ದೈನಂದಿನ ತರಬೇತಿ

ಉಡುಪಿ: ಉಡುಪಿಯ ಪ್ರೈಮ್‌ ಸಂಸ್ಥೆಯು ಮುಂದೆ ಪ್ರಕಟಗೊಳ್ಳಲಿರುವ ಐಬಿಪಿಎಸ್‌, ಕರ್ಣಾಟಕ ಬ್ಯಾಂಕ್‌ ಕ್ಲರಿಕಲ್/ ಆಫೀಸರ್ ನೇಮಕಾತಿ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರ ನೇತೃತ್ವದಲ್ಲಿ ಜೂ. 29ರಿಂದ ನೂತನ ದೈನಂದಿನ ತರಬೇತಿ ತರಗತಿಗಳನ್ನು ಬ್ರಹ್ಮಗಿರಿ ಬಳಿಯ ಪ್ರೈಮ್‌ ಕೇಂದ್ರದಲ್ಲಿ ಆರಂಭಿಸಲಿದೆ.
ಪ್ರತೀ ಸೋಮವಾರದಿಂದ ಶನಿವಾರ ಸಂಜೆ 5ರಿಂದ 6.30ರ ವರೆಗೆ, ಪ್ರತೀ ಭಾನುವಾರ ಮಧ್ಯಾಹ್ನ 3.30ರಿಂದ 6.30ರ ವರೆಗೆ ನಡೆಯಲಿರುವ 200 ಗಂಟೆಗಳ ಈ ತರಬೇತಿ ಬ್ಯಾಂಕಿಂಗ್‌ ಪರೀಕ್ಷೆಯ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯ ರೀಸನಿಂಗ್‌, ಮ್ಯಾಥ್ಸ್, ಇಂಗ್ಲಿಷ್‌, ಮೈನ್ಸ್ ಪರೀಕ್ಷೆಯ ರೀಸನಿಂಗ್‌, ಮ್ಯಾಥ್ಸ್, ಜಿಕೆ, ಇಂಗ್ಲಿಷ್‌, ಕಂಪ್ಯೂಟರ್‌ ತರಬೇತಿಯೊಂದಿಗೆ ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸವಾಲಾಗಿರುವ ಮ್ಯಾಥ್ಸ್, ರೀಸನಿಂಗ್‌ ವಿಭಾಗದ ಪ್ರಶ್ನೆಗಳನ್ನು ನಿಭಾಯಿಸಲು, ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಶ್ನೆಗಳನ್ನು ಉತ್ತರಿಸಲು ಸಹಕರಿಸುವ ವೇದಗಣಿತದ ಶಾರ್ಟ್‌ಕಟ್, ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತರಗತಿಗಳು ನಡೆಯಲಿದ್ದು, ಅಕ್ಟೋಬರ್‌ನಲ್ಲಿ ಅಂತ್ಯಗೊಳ್ಳಲಿವೆ.
ಪದವೀಧರರು, ಸ್ನಾತಕೋತ್ತರ ಪದವೀಧರರು, ಅಂತಿಮ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಮುಂದೆ ಬರಲಿರುವ ಬ್ಯಾಂಕಿಂಗ್‌, ರೈಲ್ವೆ, ಇನ್ಶೂರೆನ್ಸ್, ಪೋಸ್ಟಲ್, ಮೆಸ್ಕಾಂ ಹಾಗೂ ಇನ್ನಿತರ ಯಾವುದೇ ಆಪ್ಟಿಟ್ಯೂಡ್‌ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದು. ಸಂಸ್ಥೆಯು ಉತ್ತಮ ಶಿಕ್ಷಕ ವೃಂದ, ಗ್ರಂಥಾಲಯ, ಕಂಫ್ಯೂಟರ್‌, ಅಂತರ್ಜಾಲ, ಅನ್‌ಲೈನ್‌ ಪರೀಕ್ಷೆಗೆ ಪವರ್‌ ಪಾಯಿಂಟ್ ತರಬೇತಿ, ಮಾದರಿ ಪರೀಕ್ಷೆಯೊಂದಿಗೆ ಅಭ್ಯರ್ಥಿಗಳಿಗೆ ಬೇಸಿಕ್‌/ಅಡ್ವಾನ್ಸ್ ಸ್ಟಡಿ ಬುಕ್ಸ್, 1 ವರ್ಷ ಅವಧಿಯ ಆನ್‌ಲೈನ್‌ ಮಾರ್ಕೆಟಿಂಗ್, ಅದರ ಸೊಲ್ಯೂಶನ್‌, ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶನ ಸಂಸ್ಥೆಯ ವಿಶೇಷತೆ.
ಇದೀಗ ಆರಂಭಗೊಳ್ಳಲಿರುವ ಬ್ಯಾಂಕಿಂಗ್‌ ನೇಮಕಾತಿ ಪರೀಕ್ಷಾ ತರಬೇತಿಯ ಡೈಲಿ/ಸಂಜೆಯ ಬ್ಯಾಚ್ ಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಬ್ರಹ್ಮಗಿರಿ ಲಯನ್ಸ್ ಭವನ ಬಳಿಯ ಗ್ರೇಸ್‌ ಮೇನರ್‌ ಬಿಲ್ಡಿಂಗ್‌ನಲ್ಲಿರುವ ಪ್ರೈಮ್ ಕೇಂದ್ರವನ್ನು ಸಂಪರ್ಕಿಸಬಹುದೆಂದು ನಿರ್ದೇಶಕರ ಪ್ರಕಟನೆ ತಿಳಿಸಿದೆ.