ಉಡುಪಿ:ಉಡುಪಿ ಪ್ರೀ ಓನ್ಡ್ ಕಾರ್ಸ್ ಅಸೋಸಿಯೇಷನ್ ವತಿಯಿಂದ 15.08.2025 ರಂದು ಕೃಷ್ಣಾನುಗ್ರಹ ಸಂತೆಕಟ್ಟೆಯ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮೊಹಮ್ಮದ್ ಆಶ್ರಫ್ ಮತ್ತು ಕಾರ್ಯದರ್ಶಿಗಳಾದ ಉದಯ್ ಕಿರಣ್ ಹಾಗೂ ಸಮಿತಿಯ ಸದಸ್ಯರೊಂದಿಗೆ ಕೃಷ್ಣ ಅನುಗ್ರಹದ ಸದಸ್ಯರಾದ ಉದಯ್ ಕುಮಾರ್ ಉಪಸ್ಥಿತರಿದ್ದರು.

ಹಾಗೆಯೇ ಅಲ್ಲಿಯ ಮಕ್ಕಳಿಗೆ ಸಂಘದ ವತಿಯಿಂದ ಅಗತ್ಯ ವಸ್ತುಗಳನ್ನು ಪೂರೈಸಲಾಯಿತು.















