ಉಡುಪಿ: ಅಂದ‌ರ್-ಬಾಹ‌ರ್ ಇಸ್ಪೀಟ್ ಜೂಜಾಟದ ಅಡ್ಡೆಗೆ ಪೊಲೀಸರ ದಾಳಿ: ಐವರ ಬಂಧನ

ಉಡುಪಿ: ಅಂದ‌ರ್-ಬಾಹ‌ರ್ ಇಸ್ಪೀಟ್ ಜೂಜಾಟ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿ, 4,90,920 ನಗದು ಸೇರಿದಂತೆ ವಾಹನಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಲ್ಲಾಳ ಅಂಬಲ್ಲಮೊಗರು ನಿವಾಸಿ ನಿತಿನ್ ರಾಜ್ (35), ಕಾಪು ಪಲಿಮಾರು ಗ್ರಾಮದ ಸಚಿನ್ ಆರ್ ಶೆಟ್ಟಿ (35), ಮಂಗಳೂರು ಕಂಕನಾಡಿ ಗ್ರಾಮದ ಸತೀಶ್ @ ಕಿಶೋರ್ (38), ಸುರತ್ಕಲ್ ನಿವಾಸಿಗಳಾದ ರಂಜಿತ್ ಕೆ ಅಮೀನ್ (39) ಹಾಗೂ ರವಿ (36) ಬಂಧಿತ ಆರೋಪಿಗಳು.

ಸ್ಥಳದಲ್ಲಿದ್ದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು, ರೂ. 4,90,920 ನಗದು, ನಾಲ್ಕು ಮೊಬೈಲ್ ಫೋನ್‌ಗಳು, ಒಂದು ಪವ‌ರ್ ಬ್ಯಾಂಕ್, ಜೊತೆಗೆ ಟೊಯೋಟಾ ಫಾರ್ಚುನರ್ ಕಾರು ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.