ಉಡುಪಿ ಪೊದಾರ್ ಇಂಟರ್ ನ್ಯಾಷನಲ್ ಸ್ಕೂಲ್: ಕಾರ್ಗಿಲ್ ವಿಜಯ ದಿವಸ ಆಚರಣೆ

ಉಡುಪಿ : ನಗರದ  ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್, ಉಡುಪಿ ಇದರ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ ಜು.26 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನ ಕರ್ನಲ್ ಶಾಂತಕುಮಾರನ್ ಭಾಗವಹಿಸಿ ಮಾತನಾಡಿ,  ಸೈನಿಕರು ನಮ್ಮ ರಕ್ಷಣೆಗಾಗಿ ಹಗಳಿರುಳು ಮಳೆ, ಗಾಳಿ, ಚಳಿ ಎನ್ನದೆ ದೇಶವನ್ನು ಕಾಯುತ್ತಾರೆ.ಅವರಿಂದ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ.ಆದ್ದರಿಂದ ಅವರಿಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು.

ಶಾಲಾ ಪ್ರಾಂಶುಪಾಲರಾದ ಎಮ್.ಎಸ್. ಹಿರೇಮಠ ಮಾತನಾಡಿ, ನಾವು ನಮ್ಮ ದೇಶ ಕಾಯುವ ಸೈನಿಕರನ್ನು ಗೌರವಿಸಬೇಕು.ಮಕ್ಕಳು ಮುಂದಿನ ದಿನಗಳಲ್ಲಿ ದೇಶಸೇವೆಯತ್ತ ಒಲವು ತೋರಿಸಬೇಕು ಎಂದರು.

ಸೈನಿಕರ ಕುರಿತಾಗಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಶಿಕ್ಷಕಿ ವೇದಾವತಿ ನಿರೂಪಿಸಿದರು. ಶಿಕ್ಷಕಿ ದಿವ್ಯ ಸ್ವಾಗತಿಸಿ, ಶಿಕ್ಷಕಿ ಶಂಶದ್ ವಂದಿಸಿದರು.