ಉಡುಪಿ: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿ.ಎಂ.ಇ.ಜಿ.ಪಿ) ಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶದಲ್ಲಿ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿ ಇರುವ ಅರ್ಹ 18 ವರ್ಷ ಮೇಲ್ಪಟ್ಟ ಯುವಕ ಹಾಗೂ ಯುವತಿಯರಿಂದ ವೆಬ್‌ಸೈಟ್ https://www.kviconline.gov.in/pmegpeportal/jsp/pmegponline.jsp ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಗರಿಷ್ಠ ಯೋಜನಾ ವೆಚ್ಚ 50 ಲಕ್ಷ ರೂ. ಉತ್ಪಾದನಾ ಚಟುವಟಿಕೆ ಮತ್ತು 20 ಲಕ್ಷ ರೂ. ಆಯ್ದ ಸೇವಾ ಘಟಕಕ್ಕೆ ಬ್ಯಾಂಕ್ ಸಾಲದೊಂದಿಗೆ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವವರಿಗೆ ಅವಕಾಶವಿದ್ದು, ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸುವ ಘಟಕಗಳಿಗೆ ಯೋಜನಾ ವೆಚ್ಚದ ಮೇಲೆ ಶೇ. 25 ರಿಂದ 35 ರ ವರೆಗೆ ಹಾಗೂ ನಗರ ಪ್ರದೇಶದಲ್ಲಿ ಸ್ಥಾಪಿಸುವ ಘಟಕಗಳಿಗೆ ಯೋಜನಾ ವೆಚ್ಚದ ಮೇಲೆ ಶೇ.15 ರಿಂದ 25 ರ ವರೆಗೆ ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (ಕೆ.ವಿ.ಐ.ಬಿ), ಬಿ ಬ್ಲಾಕ್, ಎರಡನೇ ಮಹಡಿ, ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಉಡುಪಿ ದೂ.ಸಂಖ್ಯೆ: 0820-2574855 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












