ಉಡುಪಿ: ನಗರದ ಪೂರ್ಣಪ್ರಜ್ನ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಕ್ಯಾಂಪಸ್ನಲ್ಲಿ ಸೆ.26ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪೂರ್ಣ ಉದ್ಯೋಗ ಮೇಳ 2025 – ಉದ್ಯೋಗ ಮೇಳ ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳವು ಸಂಸ್ಥೆಯ ಎಂಬಿಎ, ಎಂಸಿಎ, ಎಂ.ಕಾಂ ಸ್ಟ್ರೀಮ್ಗಳ ಹೊಸ ಪದವೀಧರರಿಗೆ ಮುಕ್ತವಾಗಿದೆ, ಅವರು ಉತ್ತಮ ಉದ್ಯೋಗಾವ ಕಾಶಗಳನ್ನು ಅನ್ವೇಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಪೂರ್ಣ ಉದ್ಯೋಗ ಮೇಳವನ್ನು ಆಭರಣ ಮೋಟಾರ್ಸ್ ಉಡುಪಿ ಇವರು ಪ್ರಾಯೋಜಿಸಲಿದ್ದಾರೆ.
30ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಮತ್ತು ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಬ್ಯಾಂಕಿಂಗ್, ಸಾಫ್ಟ್ವೇರ್, ಫೈನಾನ್ಸ್, ರಿಟೇಲ್, ಶಿಪ್ಪಿಂಗ್ ಮತ್ತು ವಾಹನೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಪ್ರಕಟನೆ ತಿಳಿಸಿದೆ.


















