ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ: ಮಣಿಪಾಲದ ಪ್ರೆಸ್‌ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಕೊಳಂಬೆ ನಿವಾಸಿ ಅರುಣ ಗೌಡ (32) ಎಂಬ ವ್ಯಕ್ತಿಯು ಡಿಸೆಂಬರ್ 7 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

157 ಸೆಂ.ಮೀ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.