ಉಡುಪಿ: ಪೆರ್ಣಂಕಿಲದ ಸೀಮಾ ತೆಂಡೂಲ್ಕರ್ ಭಾರತೀಯ ನೌಕಾಪಡೆಯ ಪೈಲಟ್ ಆಗಿ ಆಯ್ಕೆ.

ಉಡುಪಿ: ಭಾರತೀಯ ನೌಕಾಪಡೆ ಸೇರಬೇಕೆಂಬ ಕನಸು ಕಂಡಿದ್ದ ಉಡುಪಿ ಜಿಲ್ಲೆಯ ಪೆರ್ಣಂಕಿಲ ಅನ್ನೋ ಪುಟ್ಟ ಗ್ರಾಮದ ಹುಡುಗಿ ಸೀಮಾ ತೆಂಡೂಲ್ಕರ್ ಮಾದರಿಯಾಗಿದ್ದಾರೆ.

ಎಂಜಿನೀಯರಿಂಗ್ ಪದವಿ ಪಡೆದಿದ್ದರೂ ಭಾರತೀಯ ಶಸಸ್ತ್ರ ಪಡೆಯಲ್ಲಿ ದೇಶ ಸೇವೆ ಮಾಡಲು ಟೊಂಕ ಕಟ್ಟಿದ್ದ ಸೀಮಾ ತೆಂಡೂಲ್ಕರ್ ಇದೀಗ ಭಾರತೀಯ ನೌಕಾಪಡೆಯಲ್ಲಿ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ. ಸದಾನಂದ್ ನಾಯಕ್ ಹಾಗೂ ಜಯಶ್ರಿ ತೆಂಡೂಲ್ಕರ್ ಪುತ್ರಿ ಸೀಮಾ ತೆಂಡೂಲ್ಕರ್ ತಮ್ಮ ಬಾಲ್ಯದ ಕನಸಿನಂತೆ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ.