ಉಡುಪಿ: ಇಂಚರ ಗೆಳೆಯರ ಬಳಗ ಜೋಗಿಬೆಟ್ಟು ಪೆರ್ಡೂರು ಇದರ ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ 3ನೇ ಕಾರ್ಯಕ್ರಮ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಭಾನುವಾರ ನಡೆಯಿತು.
ಬೆಳಿಗ್ಗೆ 8 ರಿಂದ ಜೋಗಿಬೆಟ್ಟಿನಿಂದ ಪ್ರಾರಂಭಿಸಿ ಹತ್ರಬೈಲು ಭಜನಾ ಮಂದಿರದವರೆಗೆ, ಪಾಡಿಗಾರ ಕೈಕಂಬ ರಸ್ತೆಯಿಂದ ಪೆರ್ಡೂರು ಹೈಸ್ಕೂಲ್ ನ ವರೆಗೆ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭ ದಿವಾಕರ್ ಶೆಟ್ಟಿ, ಹೊಸನಗರದ ಪಿ.ಡಿ.ಓ ಅಧಿಕಾರಿ ವಿಶ್ವನಾಥ್, ಉದ್ಯಮಿ ಪ್ರವೀಣ್ ಸೇರ್ವೇಗಾರ್ ಹತ್ರಬೈಲು, ಶ್ರೀ ರಾಮ ಭಜನಾ ಮಂಡಳಿ ಕುಕ್ಕುಂಜಾರು ಇದರ ಅಧ್ಯಕ್ಷರು ಹಾಗೂ ಸದಸ್ಯರು, ಇಂಚರ ಗೆಳೆಯರ ಬಳಗದ ಗೌರವಾಧ್ಯಕ್ಷ ಆನಂದ ಗೌಡ, ಅಧ್ಯಕ್ಷ ಸತೀಶ್ ಕುಮಾರ್, ಉಪಾಧ್ಯಕ್ಷ ಸಂದೀಪ್ ಕರ್ಕೇರ, ಸ್ಥಾಪಕ ಅಧ್ಯಕ್ಷರಾದ ವಸಂತ್ ಕುಲಾಲ್, ಮಾಜಿ ಅಧ್ಯಕ್ಷರಾದ ಶಿವರಾಮ್ ಮೈಂದಾನ್, ಕಾರ್ಯದರ್ಶಿ ಸಂತೋಷ, ಕೋಶಾಧಿಕಾರಿ ಗುರುರಾಜ್ ಆಚಾರ್ಯ, ಸಿದ್ಧಿ ಎಲಕ್ಟ್ರಾನಿಕ್ಸ್ ಹರೀಶ್ ಸೇರ್ವೇಗಾರ್, ಇಂಚರ ಗೆಳೆಯರ ಬಳಗದ ಸರ್ವ ಸದಸ್ಯರು ಹಾಗೂ ಜೋಗಿಬೆಟ್ಟು ಪರಿಸರದ ಸ್ಥಳೀಯ ಮಕ್ಕಳು ಹಾಗೂ ಹಿರಿಯ ಕಿರಿಯ ಬಂಧುಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.