ಉಡುಪಿ: ಆರೋಗ್ಯ ಅಧಿಕಾರಿ, ಸಿಬ್ಬಂದಿಗಳಿಗೆ ಪರ್ಯಾಯ ಕೃಷ್ಣಾಪುರ ಮಠದಿಂದ ಗೌರವ

ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ಪರ್ಯಾಯ ಕೃಷ್ಣಾಪುರ ಮಠಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಪರ್ಯಾಯೋತ್ಸವದ ಸಂದರ್ಭದಲ್ಲಿ ಭಕ್ತಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ಸಹಕರಿಸಿದ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶನಿವಾರ ಮಠದಲ್ಲಿ ಸನ್ಮಾನಿಸಿದರು.

ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ವೈದ್ಯರಾದ ಡಾ.ರಾಮ ರಾವ್, ಡಾ.ಪ್ರಶಾಂತ್ ಭಟ್, ಡಾ.ನಾಗರತ್ನ, ಡಾ.ವಾಸುದೇವ್ ಹಾಗೂ ರಥಬೀದಿಯ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ವೈದ್ಯರಾದ ಡಾ. ರವಿಚಂದ್ರ ಉಚ್ಚಿಲ, ಡಾ.ಅರ್ಚನಾ, ಡಾ.ಸತೀಶ್, ಡಾ.ಜಯಂತ್, ಡಾ. ಸ್ವಾತಿ ಶಿವಾನಂದ ಅವರಿಗೆ ಶ್ರೀಗಳು ಕೃಷ್ಣ ಪ್ರಸಾದ ನೀಡಿ ಹರಸಿದರು. ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ ಪಾಡಿಗಾರ್, ರಾಜಗೋಪಾಲ್ ಉಪಸ್ಥಿತರಿದ್ದರು.