ಉಡುಪಿ: ಕೋವಿಡ್‌ ನಿಯಮ ಉಲ್ಲಂಘಿಸಿ ಮೆರವಣಿಗೆ; ಪ್ರಕರಣ ದಾಖಲು

ಉಡುಪಿ: ಯಾವುದೇ ಪೂರ್ವಾನುಮತಿ ಇಲ್ಲದೆ ಕೋವಿಡ್‌-19 ನಿಯಮಗಳನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪಕ್ಷದ 7ನೇ ಜಿಲ್ಲಾ ಸಮ್ಮೇಳನ ಸಭೆ ಆಯೋಜಕರ ಮೇಲೆ ಪ್ರಕರಣ ದಾಖಲಾಗಿದೆ.

ನ. 28ರಂದು ಸಿಪಿಐ(ಎಂ) ಪಕ್ಷದ 7ನೇ ಜಿಲ್ಲಾ ಸಮ್ಮೇಳನ ಸಭೆ ನಡೆಸಲು ಮಾತ್ರ ನಗರಸಭೆ ಅನುಮತಿ ನೀಡಿತ್ತು. ಆದರೆ, ಆಯೋಜಕರು ಅಂದು ಬೆಳಿಗ್ಗೆ 11 ಗಂಟೆಗೆ ಯಾವುದೇ ಪೂರ್ವಾನುಮತಿ ಇಲ್ಲದೆ ಕೋವಿಡ್‌-19 ನಿಯಮಗಳನ್ನು ಉಲ್ಲಂಘನೆ ಮಾಡಿ ಉಡುಪಿ ಬೋರ್ಡ್‌ಹೈಸ್ಕೂಲ್‌ನಿಂದ ಬ್ರಹ್ಮಗಿರಿ ವೃತ್ತದ ತನಕ ಮೆರವಣಿಗೆ ನಡೆಸಿದ್ದರು.

ಇದರಲ್ಲಿ ಕೆಲವರು ಮಾಸ್ಕ್‌ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಇರುವ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಡಾ. ಉದಯ ಕುಮಾರ್‌ಶೆಟ್ಟಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.