ಉಡುಪಿ: 2017-18 ನೇ ಸಾಲಿನ ಬಾಕಿ ಉಳಿದಿರುವ ಗುರಿಗೆ, 2019-20 ನೇ ಸಾಲಿನಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ನಿರುದ್ಯೋಗಿ ಯುವಕ/ ಯುವತಿಯರು ಸಣ್ಣ ಕೈಗಾರಿಕೆ, ಹೈನುಗಾರಿಕೆ, ದಿನಸಿ ಅಂಗಡಿ, ಸಣ್ಣ ವ್ಯಾಪಾರ, ಸೈಕಲ್ ವ್ಯಾಪಾರ, ಟೈಲರಿಂಗ್ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ಶೇ. 50 ಭಾಗ ಗರಿಷ್ಟ 35000 ರೂ. ಸಹಾಯಧನ ಹಾಗೂ ಗರಿಷ್ಟ 65000 ರೂ ವರೆಗೆ ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಸ್ವಯಂ ಉದ್ಯೋಗ ಯೋಜನೆಯನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ.
ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರಬಾರದು. ಅರ್ಜಿದಾರರು ಉಚಿತ ಅರ್ಜಿ ನಮೂನೆಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ರಜತಾದ್ರಿ, ಮಣಿಪಾಲ ಕಚೇರಿಯಿಂದ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0820-2574884 ನ್ನು ಸಂಪರ್ಕಿಸುವಂತೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












