ಉಡುಪಿ ವಾರ್ತಾ ಇಲಾಖೆಯ ಪ್ರೇಮಾನಂದ್ ರಾವ್ ರವರಿಗೆ ಸಿಬ್ಬಂದಿಗಳಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಕಚೇರಿಯಲ್ಲಿ ಸೇವಕ ಹುದ್ದೆಯಲ್ಲಿ ಕರ್ತವ್ಯ
ನಿರ್ವಹಿಸಿದ ಪ್ರೇಮಾನಂದ್ ರಾವ್ ಇವರಿಗೆ ಬೀಳ್ಕೊಡುಗೆ ಸಮಾರಂಭವನ್ನು ವಾರ್ತಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ
ಏರ್ಪಡಿಸಲಾಯಿತು.

ಸಹಾಯಕ ನಿರ್ದೇಶಕ ಬಿ ಮಂಜುನಾಥ್ ರವರು ಮಾತನಾಡಿ, ಪ್ರೇಮಾನಂದ್ ರಾವ್ ರವರು 1999 ರಿಂದ ಉಡುಪಿ ಕಚೇರಿಯಲ್ಲಿಯೇ 26 ವರ್ಷಗಳ ಕಾಲ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿ, ತಮ್ಮ ಕರ್ತವ್ಯವನ್ನು
ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅನ್ಯೋನ್ಯವಾದ ಸ್ನೇಹವನ್ನು ಎಲ್ಲರೊಂದಿಗೆ ಹೊಂದಿದ್ದರು. ಅವರ ನಿವೃತ್ತಿ ಜೀವನ
ಸುಖಕರವಾಗಿರಲಿ. ನಿವೃತ್ತಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಉತ್ತಮ ಅರೋಗ್ಯ ದೇವರು ಕರುಣಿಸಲಿ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರೇಮಾನಂದ್ ರಾವ್ ಹಾಗೂ ಅವರ ಧರ್ಮಪತ್ನಿಯವರಾದ ಶೋಭಾ ಅವರಿಗೆ ಶಾಲು ಹೊದಿಸಿ, ಫಲ ತಾಂಬೂಲ ಹಾಗೂ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿಗಳು ಸ್ಮರಣಿಕೆ ನೀಡಿದರು.ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳಾದ ಹರೀಶ್ ಭಟ್, ಸತೀಶ್ ಶೇಟ್, ರೆಡ್‌ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿಗಳು ಹಾಗೂ
ಮತ್ತಿತರರು ಉಪಸ್ಥಿತರಿದ್ದರು.