ಉಡುಪಿ: ಕಸದ ಬುಟ್ಟಿಗೆ ನವಜಾತ ಶಿಶುವನ್ನು ಎಸೆದು ಹೋದ ಘಟನೆಯೊಂದು ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರಿನ ಮಾಂಸಹಾರಿ ಹೊಟೇಲ್ ಬಳಿ ನಡೆದಿದೆ.
ಇಂದು ಬೆಳಿಗ್ಗೆ ನಗರ ಸಭೆಯ ಸ್ವಚ್ಛತಾ ಸಿಬ್ಬಂದಿ ಹೋಟೆಲ್ ಎದುರಿನ ಕಸದ ಬುಟ್ಟಿಯ ತ್ಯಾಜ್ಯದ ಸಂಗ್ರಹ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ.
ಕಸ ತುಂಬಿದ್ದ ಪೈಂಟ್ ಡಬ್ಬಿಯಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ನಗರಸಭೆಯ ಸಿಬ್ಬಂದಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದೊಂದಿಗೆ ಅಲ್ಲೇ ಇರುವ ಮಕ್ಕಳ ಆಸ್ಪತ್ರೆಗೆ ಮಗವನ್ನು ದಾಖಲಿಸಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.
ಯಾರು ಮಗವನ್ನು ಎಸೆದಿದ್ದಾರೆ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.
 
								 
															





 
															 
															 
															











