ಉಡುಪಿ: ರಾಷ್ಟ್ರೀಯ ಹೆದ್ದಾರಿ 169 (ಎ)ರ ಕಡಿಯಾಳಿಯಿಂದ ಆತ್ರಾಡಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಮಣಿಪಾಲ ಬಸ್ ನಿಲ್ದಾಣದ ಬಳಿ ಇದ್ದ ಮರವೊಂದನ್ನು ಮಂಗಳವಾರ ಕಡಿದ ಪರಿಣಾಮ ಅದರಲ್ಲಿದ್ದ ನೀರುಕಾಗೆಯ ಗೂಡುಗಳು ನೆಲಕ್ಕೆ ಬಿದ್ದಿವೆ.
ಗೂಡಿನಲ್ಲಿದ್ದ ನೀರುಕಾಗೆ ಮರಿಗಳು ಹಾರಲಾಗದೆ ಮಣಿಪಾಲ ಕ್ಯಾನ್ಸರ್ ಆಸ್ಪತ್ರೆಯ ಕೌಂಪೌಂಡ್ ನಲ್ಲಿ ರಾತ್ರಿ ಕಳೆಯುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.