ಉಡುಪಿ: ಉಡುಪಿ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಈ ವರ್ಷ ಸಂಗ್ರಹಿಸಿದ ಝಕಾತ್ ಮೊತ್ತದಿಂದ ಬಡ ಫಲಾನು ಭವಿಗಳಿಗೆ ಸ್ವಉದ್ಯೋಗಕ್ಕಾಗಿ ಆರು ದ್ವಿಚಕ್ರ ವಾಹನ ವಿತರಿಸುವ ಕಾರ್ಯಕ್ರಮ ವನ್ನು ಶುಕ್ರವಾರ ಉಡುಪಿ ಜಾಮೀಯ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಫೇಮಸ್ ಗ್ರೂಪ್ನ ರಿಯಾಜ್ ಅಹ್ಮದ್ ಫಲಾನು ಭವಿಗಳಾದ ಅಬ್ದುಲ್ ಅಜೀಜ್ ಹೊನ್ನಾಳ, ನಯಾಜ್ ಹೊನ್ನಾಳ, ಅಬೂಬಕ್ಕರ್ ಕೊಂಬಗುಡ್ಡೆ, ಯೂನಿಸ್ ಖಾನ್ ಫಕೀರ್ಣಕಟ್ಟೆ, ನಿಸಾರ್ ಸಾಸ್ತಾನ, ಮುಹಮ್ಮದ್ ಶರೀಫ್ ಫಣಿಯೂರು ಅವರಿಗೆ ದ್ವಿಚಕ್ರ ವಾಹನಗಳ ಕೀಲಿ ಕೈಯನ್ನು ವಿತರಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ವಹಿಸಿ ದ್ದರು. ಮಸೀದಿಯ ಇಮಾಮ್ ವೌಲಾನ ರಶೀದ್ ಅಹ್ಮದ್ ನದ್ವಿ ಮಾತನಾಡಿ ದರು. ವೌಝಿನ್ ಹಫೀಝ್ ಯುನೂಸ್ ಕುರಾನ್ ಪಠಿಸಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಎಸ್.ಉಮರ್ ಸ್ವಾಗತಿಸಿದರು. ಗಫೂರ್ ಆದಿ ಉಡುಪಿ ವಂದಿಸಿದರು. ಸದಸ್ಯ ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಯು.ಇಬ್ರಾಹಿಂ, ಸದಸ್ಯರಾದ ಫಯಾಜ್, ಖಾಲಿದ್, ಮುನೀರ್, ಮುಹಮ್ಮದ್ ಶಮೀಮ್, ಫರ್ವೇಜ್, ಅರ್ಶಾದ್, ಮುಹಮ್ಮದ್ ವೌಲಾ ಉಪಸ್ಥಿತರಿದ್ದರು