udupixpress
Home Trending ಉಡುಪಿ ನಗರಸಭೆ: ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮಿ ಮಂಜುನಾಥ್ ಕೊಳ...

ಉಡುಪಿ ನಗರಸಭೆ: ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮಿ ಮಂಜುನಾಥ್ ಕೊಳ ಆಯ್ಕೆ

ಉಡುಪಿ: ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪರ್ಕಳ ವಾರ್ಡ್ ನ ಬಿಜೆಪಿ ಸದಸ್ಯೆ ಸುಮಿತ್ರಾ ಆರ್. ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಮಲ್ಪೆ ಕೊಳ ವಾರ್ಡ್ ನ ಸದಸ್ಯೆ ಲಕ್ಷ್ಮೀ ಮಂಜುನಾಥ್ ಕೊಳ ಅವರು ಆಯ್ಕೆಯಾಗಿದ್ದಾರೆ.

ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತಿಯಲ್ಲಿ ನಡೆದ ಪಕ್ಷದ ವರಿಷ್ಠರ ಸಮಿತಿ ಸಭೆಯಲ್ಲಿ ಇವರನ್ನು ನೇಮಕ ಮಾಡಲಾಗಿದೆ.

ಸುಮಿತ್ರಾ ನಾಯಕ್ ಮೂರು ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಲಕ್ಷ್ಮೀ ಮಂಜುನಾಥ್ ಕೊಳ ಅವರು ಮೊದಲ ಬಾರಿಗೆ ಕೊಳ ವಾರ್ಡ್ ನಿಂದ ಆಯ್ಕೆಯಾಗಿದ್ದಾರೆ.

35 ಸದಸ್ಯ ಬಲದ ಉಡುಪಿ ನಗರಸಭೆಯಲ್ಲಿ 31 ಮಂದಿ ಬಿಜೆಪಿ‌ ಸದಸ್ಯರಿದ್ದಾರೆ. ಕಾಂಗ್ರೆಸ್ ನಾಲ್ಕು ಮಂದಿ ಸದಸ್ಯರನ್ನು ಹೊಂದಿದೆ.

error: Content is protected !!