ಇ-ಆಸ್ತಿ ತಂತ್ರಾಂಶ: ನಗರಸಭೆ ಸಿಬ್ಬಂದಿ ಮನೆ ಮನೆ ಭೇಟಿ ಕಾರ್ಯಕ್ರಮ

ಉಡುಪಿ: ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆ.ಎಂ.ಎಫ್ -24 ಗಣಕೀಕರಣ ಕಾರ್ಯವನ್ನು 2023 ರ ಫೆಬ್ರವರಿ ಅಂತ್ಯದ ಒಳಗೆ ಕಾಲೋಚಿತಗೊಳಿಸಬೇಕಾಗಿರುವುದರಿಂದ ಉಡುಪಿ ನಗರಸಭೆಯ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಕುಟುಂಬದ ದಾಖಲೆಯ ಹೆಸರು, ಮಾಲೀಕರ ಭಾವಚಿತ್ರ, ಸ್ವತ್ತಿನ ಭಾವಚಿತ್ರ, ಮಾಲೀಕರ ಗುರುತಿನ ದಾಖಲೆ, ತೆರಿಗೆ ಪಾವತಿ ರಶೀದಿ, ಮಾಲೀಕತ್ವದ ದಾಖಲಾತಿ, ಕಟ್ಟಡ ಪರವಾನಿಗೆ, ದಸ್ತಾವೇಜು, ಅಕ್ಯುಪೆನ್ಸಿ ಸರ್ಟಿಫಿಕೇಟ್ ಹಾಗೂ ಇನ್ನಿತರ ದಾಖಲೆ ನೀಡಿ ಸದರಿ ಸರ್ವೇ ಕಾರ್ಯದಲ್ಲಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.