ಉಡುಪಿ:ಯುವಕ ನಾಪತ್ತೆ

ಉಡುಪಿ:ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಬಿ.ಸಿ ರಸ್ತೆ ಕಾಂತರಬೆಟ್ಟು ನಿವಾಸಿ ಜಯೇಂದ್ರ (26) ಎಂಬ ಯುವಕನು ಜೂನ್ 23 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ 6 ಇಂಚು ಎತ್ತರ, ಕೋಲು ಮುಖ, ಸದೃಢ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹೊಂದಿರುತ್ತಾರೆ. ಸದ್ರಿ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಡಿ.ವೈ.ಎಸ್.ಪಿ ಕುಂದಾಪುರ ಮೊ.ನಂ: 9480805422, ಪಿ.ಐ ಕುಂದಾಪುರ ಠಾಣೆ ಮೊ.ನಂ: 9480805455, ಪಿ.ಎಸ್.ಐ ಕುಂದಾಪುರ ಠಾಣೆ ಮೊ.ನಂ: 8277988957 ಹಾಗೂ 8277988959 ಅನ್ನು
ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.