ಉಡುಪಿ: ಖಾಸಗಿ ಜಾಗಕ್ಕೆ ಬೆಂಕಿ ಹಚ್ಚಿದ ಮಾನಸಿಕ ಅಸ್ವಸ್ಥ- ತಪ್ಪಿದ ಭಾರೀ ಅನಾಹುತ

ಉಡುಪಿ: ಮಾನಸಿಕ ಅಸ್ವಸ್ಥನೋರ್ವ ಖಾಸಗಿ ಜಾಗಕ್ಕೆ ಬೆಂಕಿ‌ಹಚ್ಚಿದ್ದು ಇದರಿಂದ ಭಾರಿ ಅನಾಹುತ ತಪ್ಪಿದ ಘಟನೆ ಮಂಗಳವಾರ ನಡೆದಿದೆ.
ಶ್ರೀ ಕೃಷ್ಣಮಠದ ಹಿಂಭಾಗದ ಗೋವಿಂದ ಪುಷ್ಕರಣಿ ಮಾರ್ಗದಲ್ಲಿರುವ ಖಾಸಗಿ ಜಾಗಕ್ಕೆ ಮಾನಸಿಕ ಅಸ್ವಸ್ಥನೋರ್ವ ಬೆಂಕಿಹಚ್ಚಿದ್ದು, ಇದರ ಪರಿಣಾಮ ಬೆಂಕಿಯು ಖಾಲಿ ಜಾಗಕ್ಕೆ ವಿಸ್ತರಿಸಿದೆ.

ಖಾಸಗಿ ಜಾಗದ ಸಮೀಪದಲ್ಲಿ ಶಾಲೆ, ಮನೆಯಿರುವ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಿಯರು ಕೂಡಲೇ ಅಗ್ನಿ ಶಾಮಕ್ಕೆ ವಿಷಯ ‌ತಿಳಿಸಿದ್ದು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.