ಉಡುಪಿ:ಓಸ್ಕರಣ್ಣನ ಕನಸಿನ ಮತ್ತು ನನಸಿನ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಶ್ರಯದಲ್ಲಿ
ಓಸ್ಕರ್ ಫರ್ನಾಂಡಿಸ್‌ರವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ದಿ.7.09.2025 ಭಾನುವಾರದಂದು ಕಾಂಗ್ರೆಸ್ ಭವನ, ನಾಯರಕೆರೆ ಬ್ರಹ್ಮಗಿರಿ, ಉಡುಪಿಯಲ್ಲಿ ಸಮಯ ಬೆಳಿಗ್ಗೆ 8:00 ಗಂಟೆಯಿಂದ ನೋಂದಣಿ ಆರಂಭವಾಗಲಿದೆ.
ಸ್ಪರ್ಧೆಗಳ ವಿವರ:
1ನೇ ತರಗತಿಯಿಂದ 4ನೇ ತರಗತಿ
- ಚಿತ್ರಕಲೆ (ಸ್ವಾತಂತ್ರ್ಯ ಹೋರಾಟಗಾರರು)
5ನೇ ತರಗತಿಯಿಂದ 7ನೇ ತರಗತಿ
- ಪ್ರಬಂಧ (ಭಾರತ ಸಂವಿಧಾನ)
- ಚಿತ್ರಕಲೆ (ಸ್ವಾತಂತ್ರ ಹೋರಾಟಗಾರರು)
- ದೇಶ ಭಕ್ತಿಗೀತೆ (ಸಮೂಹ)
8ನೇ ತರಗತಿಯಿಂದ 10ನೇ ತರಗತಿ
- ಕೊಲೆಜ್ ಆರ್ಟ್ (ರಾಜಕೀಯ)
- ಪ್ರಬಂಧ (ಭಾರತ ಸಂವಿಧಾನ)
- ದೇಶ ಭಕ್ತಿಗೀತೆ (ಸಮೂಹ)
ನಿಯಾಮವಳಿ :
- ಪ್ರತಿಯೊಂದು ಸ್ಪರ್ಧೆಗೆ ಗರಿಷ್ಠ ಮಿತಿ ಇರುವುದಿಲ್ಲ. ಎಷ್ಟು ವಿದ್ಯಾರ್ಥಿಗಳು ಬೇಕಾದರೂ ಭಾಗವಹಿಸಬಹುದು.
- ಭಾಗವಹಿಸುವ ವಿದ್ಯಾರ್ಥಿಗಳು ಶಾಲೆ ಮುಖ್ಯ ಅಧ್ಯಾಪಕರಿಂದ ಪತ್ರ ಅಥವಾ ಗುರುತುಪತ್ರ (ID)ತರತಕ್ಕದ್ದು.
- ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
- ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು.
- ಭಾಗವಹಿಸುವ ಎಲ್ಲರಿಗೂ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಇರುತ್ತದೆ.
- ನಿರ್ಣಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9901866998












