ಉಡುಪಿ: ನಗರದ ಕೋರ್ಟ್ ಬದಿಯ ರಸ್ತೆಯ ಹೊಟೇಲ್ ಉಷಾ ಎದುರಿನ ಪೈ ಸೇಲ್ಸ್ ಹಿಂಬದಿಯಲ್ಲಿರುವ ಮೆಡಿಕೇರ್ ಸೆಂಟರ್ ಕಟ್ಟಡದಲ್ಲಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್‌ನ ಅಂಗ ಸಂಸ್ಥೆಯಾಗಿ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬ್ ಮತ್ತು ಮೆಡಿಕೇರ್ ಮೆಡಿಕಲ್ಸ್ ಭಾನುವಾರ ಶುಭಾರಂಭಗೊಂಡಿತು.
ಮೂಳೆ ತಜ್ಞ ಡಾ.ರವೀಂದ್ರನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಿರಿಜಾ ಹೆಲ್ತ್ ಕೇರ್ ಸಂಸ್ಥೆ ತನ್ನ ಸೇವೆಯ ಇಂದು ಕರಾವಳಿಯಾದ್ಯಂತ ಮನೆಮಾತಾಗಿದೆ. ರಾಜ್ಯದ ಹಲವು ಕಡೆ ಶಾಖೆಗಳನ್ನು ತೆರೆಯಲು ಉದ್ದೇಶಿಸಿರುವ ಈ ಸಂಸ್ಥೆ ಮುಂದೆ ಇನ್ನಷ್ಟು ಅಭಿವೃದ್ಧಿ ಕಾಣುವಂತಾಗಲಿ ಎಂದು ಹಾರೈಸಿದರು.
ಮೆಡಿಕೇರ್ ಮೆಡಿಕಲ್ಸ್‌ನ್ನು ಉದ್ಘಾಟಿಸಿ ಅವಿಭಜಿತ ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮಾತನಾಡಿ, ಗಿರಿಜಾ ಸಂಸ್ಥೆಯ ಸೇವೆ ಉಡುಪಿ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚು ಜನರಿಗೆ ದೊರೆಯುವಂತಾಗಲಿ ಎಂದು ಹಾರೈಸಿದರು.
ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಸಂಸ್ಥೆಯ ಲೋಗೊವನ್ನು ಅನಾವರಣಗೊಳಿಸಿದರು.
ಡಯಾಗ್ನೋಸ್ಟಿಕ್ ಲ್ಯಾಬ್‌ನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ನ್ಯಾಯ ವಾದಿ ಶ್ರೀನಿವಾಸ ಹೆಗ್ಡೆ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮಕ್ಕಳ ತಜ್ಞ ಡಾ.ಅಶೋಕ್ ಕುಮಾರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ದಿವಾಕರ್ ಕುಂದರ್, ಉದ್ಯಮಿ ಮನೋಹರ್ ಶೆಟ್ಟಿ, ಹೇಮಾ ಅಶೋಕ್‌ರಾಜ್, ಸುರೇಖಾ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಗಿರಿಜಾ ಗ್ರೂಪ್ ಆಫ್ ಕನ್ಸರ್ನ್‌ನ ರವೀಂದ್ರ ಕೆ.ಶೆಟ್ಟಿ ಸ್ವಾಗತಿಸಿ, ವಂದಿಸಿ ದರು. ಸಂಸ್ಥೆಯ ಪಾಲುದಾರ ಹರೀಶ್ ಕುಮಾರ್ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಆರ್.ಜೆ.ಎರಾಲ್ ಕಾರ್ಯಕ್ರಮ ನಿರೂಪಿಸಿದರು.
ಹೋಮ್ ಡೆಲಿವರಿ ಸೌಲಭ್ಯ:
ಸಂಪೂರ್ಣ ಹವಾನಿಯಂತ್ರಿತ ಲ್ಯಾಬ್‌ನಲ್ಲಿ ನುರಿತ ತಂತ್ರಜ್ಞರಿಂದ ಮೂತ್ರ, ರಕ್ತ, ಥೈರಾಯ್ಡಾ, ಕಿಡ್ನಿ ಫಂಕ್ಷನ್, ಲಿವರ್ ಫಂಕ್ಷನ್, ಡಯಾಬಿಟಿಸ್ ಪರೀಕ್ಷೆ ಸೇರಿದಂತೆ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಲಾಗುವುದು. ಅಲ್ಲದೆ ಅಗತ್ಯ ಉಳ್ಳವರ ಮನೆಗಳಿಗೆ ತೆರಳಿ ರಕ್ತ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು. ಮೆಡಿಕಲ್‌ನಲ್ಲಿ ಎಲ್ಲ ಬಗೆಯ ಮೆಡಿಸಿನ್‌ಗಳು ಲಭ್ಯ ಇರಲಿದ್ದು, ಹೋಮ್ ಡೆಲಿವರಿ ಸೌಲಭ್ಯ ಕೂಡ ಇದೆ ಎಂದು ಗಿರಿಜಾ ಗ್ರೂಪ್ ಆಫ್ ಕನ್ಸರ್ನ್‌ನ ರವೀಂದ್ರ ಕೆ.ಶೆಟ್ಟಿ ತಿಳಿಸಿದ್ದಾರೆ.