‘ಮಗನ ಬರ್ತ್ ಡೇ ನನ್ನ ಡೆತ್ ಡೇ’ ವ್ಯಾಟ್ಸಾಪ್ ಸಂದೇಶ ರವಾನಿಸಿ ಆತ್ಮಹತ್ಯೆಗೆ ಶರಣಾದ ಮಾರ್ಪಳ್ಳಿ ನಿವಾಸಿ

ಉಡುಪಿ,ಮಾ.28: ಮಾರ್ಪಳ್ಳಿ- ನಂದಗೋಕಲ ಇಲ್ಲಿಯ ಬಾಡಿಗೆ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊರ್ವರು ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿ ವ್ಯಕ್ತಿ ದಿನೇಶ್ ಶೆಟ್ಟಿ (52 ವ) ತಂದೆ ವಿಠಲ ಶೆಟ್ಟಿ, ಶ್ರೀದುರ್ಗಾ- ಕಬ್ಯಾಡಿಯ ನಿವಾಸಿ ಎಂದು ಗುರುತಿಸಲಾಗಿದೆ. ಮೃತನು ಮಂಚಕಲ್ಲ್ ಇಲ್ಲಿಯ ಸಿದ್ಧ ಉಡುಪು ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲವು ಸಮಯಗಳಿಂದ ಮಾರ್ಪಳ್ಳಿಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ. ಇಂದು ಮೃತನ ಮಗನ ಹುಟ್ಟು ಹಬ್ಬದ ದಿನವಾಗಿತ್ತು. ಮಿತ್ರರೆಲ್ಲರಿಗೂ “ಮಗನ ಬರ್ತ್ ಡೇ.. ನನ್ನ ಡೆತ್ ಡೇ” ಎಂದು ವ್ಯಾಟ್ಸಫ್ ಸಂದೇಶ ರವಾನಿಸಿದ್ದಾನೆಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದ್ದಾರೆ.