ಮೇ 3ರಂದು ಉಡುಪಿಯಲ್ಲಿ “ಮರಳಿ ಮನಸಾಗಿದೆ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ

ಉಡುಪಿ: ಮರಳಿ ಮನಸಾಗಿದೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಮೇ 3ರಂದು ಸಂಜೆ 4.30ಕ್ಕೆೆ ಯಕ್ಷಗಾನ ಕಲಾಕೇಂದ್ರದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಮುದೇಗೌಡ್ರು ನವೀನ್ ಕುಮಾರ್ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಎ.ಸುವರ್ಣ ಸಹಿತ ಹಲವಾರು ಮಂದಿ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾಾರೆ ಎಂದರು.

ಉಡುಪಿ, ಮಂಗಳೂರು, ಸುರತ್ಕಲ್, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ನಾಗರಾಜ್ ಶಂಕರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾಯಕ ನಟರಾಗಿ ಅರ್ಜುನ್ ವೇದಾಂತ, ನಿರೀಕ್ಷ ಶೆಟ್ಟಿ, ಸ್ಮೃತಿ, ಟಿ.ಎಸ್. ನಾಗಾಭರಣ, ಮಾನಸಿ ಸುಧೀರ್, ಭೋಜರಾಜ್ ವಾಮಂಜೂರು ಅಭಿನಯಿಸಿದ್ದಾರೆ.

ವಿನು ಮನಸು ಸಂಗೀತ ನೀಡಿದ್ದಾರೆ. ಹಾಲೇಶ್ ಎಸ್ ಛಾಯಾಗ್ರಾಹಣವಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಶಂಕರ್, ನಾಯಕ ನಟ ಅರ್ಜುನ್ ವೇದಾಂತ, ನಾಯಕ ನಟಿ ಸ್ಮೃತಿ, ಸಹನಟ ರೋಹನ್ ಇದ್ದರು.