ಉಡುಪಿ: ನವೀಕೃತ “ಮನ್ ಪಸಂದ್ ಫ್ಯಾಮಿಲಿ ರೆಸ್ಟೋರೆಂಟ್” ಉದ್ಘಾಟನೆ

ಉಡುಪಿ: ಉಡುಪಿ ಹಳೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಉಡುಪಿಯ ಪ್ರಖ್ಯಾತ ಶಾಂಭವಿ ಹೋಟೆಲ್ಸ್ ನ ಅಂಗಸಂಸ್ಥೆಯಾದ ಸಂಪೂರ್ಣ ನವೀಕೃತಗೊಂಡ “ಮನ್ ಪಸಂದ್ ಫ್ಯಾಮಿಲಿ ರೆಸ್ಟೋರೆಂಟ್” ಭಾನುವಾರ ಉದ್ಘಾಟನೆಗೊಂಡಿತು.

ಉಜ್ವಲ್ ಡೆವಲರ್ಪ್ ಪ್ರವರ್ತಕ ಪುರುಷೋತ್ತಮ ಶೆಟ್ಟಿ ಹಾಗೂ ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ನವೀಕೃತ ಹೋಟೆಲ್ ಅನ್ನು ಉದ್ಘಾಟಿಸಿ ಶುಭಹಾರೈಸಿದರು. ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ನೌಕರರ ಹಿತ ಕಾಪಾಡಿದಾಗ ಒಂದು ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಮನ್ ಪಸಂದ್ ರೆಸ್ಟೋರೆಂಟ್ ಗ್ರಾಹಕರ ಮನಸ್ಸು ಗೆಲ್ಲಬೇಕು. ಆಗ ಹೋಟೆಲ್ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ. ರವೀಂದ್ರ ಶೆಟ್ಟಿ ಒಡೆತನದ ಈ ಹೋಟೆಲ್ ಗ್ರಾಹಕರ ಮನಸ್ಸು ಗೆದ್ದು ಯಶಸ್ಸುಗಳಿಸಲಿ ಎಂದು ಹಾರೈಸಿದರು.

ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ಡಿಸೋಜಾ ನಂದಳಿಕೆ ಶುಭಹಾರೈಸಿದರು. ವಿವಿಧ ಗಣ್ಯರು ಭಾಗವಹಿಸಿದ್ದರು.

ಹೋಟೆಲ್ ನ ವಿಶೇಷತೆ:
ಸೌತ್ ಇಂಡಿಯನ್ ಹಾಗೂ ನೌರ್ತ್ ಇಂಡಿಯನ್ ಶೈಲಿಯ ರುಚಿಕರ ಖಾದ್ಯಗಳು ಲಭ್ಯವಿದೆ. ಇದರ ಜೊತೆಗೆ ತಂದೂರಿ ಖಾದ್ಯಗಳು, ವಿಶೇಷವಾಗಿ ಕರಾವಳಿ ಶೈಲಿಯ ಏಡಿ, ಪ್ರಾನ್ಸ್, ಕೊಯ್ಯಲು, ಮೀನಿನ ಖಾದ್ಯಗಳಾದ ತವಾ ಫ್ರೈ, ರವಾ ಫ್ರೈ, ತಂದೂರಿ ಐಟಂಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕ ರವೀಂದ್ರ ಶೆಟ್ಟಿ ತಿಳಿಸಿದರು.