MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಮೆಹಂದಿ ಬಿಡಿಸುವ ಕಾರ್ಯಕ್ರಮ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್ ನಲ್ಲಿ ವಿಶ್ವ ಯುವ ಕೌಶಲ್ಯ ದಿನದ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಉಚಿತ ಮೆಹಂದಿ ಬಿಡಿಸುವ ಕಾರ್ಯಕ್ರಮ ಇಂದು (ಜು.12) ನಡೆಯಿತು.

ಈ ಸಂದರ್ಭದಲ್ಲಿ ಭಾಗವಹಿಸಿದ ಮಹಿಳೆಯರು, ವಿದ್ಯಾರ್ಥಿಗಳು, ಓರೇನ್ ಇಂಟರ್ನ್ಯಾಷನಲ್ ಸೆಂಟರ್ ಹೆಡ್ ನೀತಾ ಶೆಟ್ಟಿ, ಶೃತಿ ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಕೌಶಲ್ಯ ತರಬೇತಿಯ ಮೂಲಕ ಆವೃತ್ತಿಪರಾಗಲು ‘ಡಿಪ್ಲೋಮಾ ಇನ್ ಪ್ರೊಫೆಷನಲ್ ಮೆಹೆಂದಿ’ ಕೋರ್ಸ್‌ ಆರಂಭಗೊಂಡಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಸ್ಥಳ: ಓರೇನ್ ಇಂಟರ್ನ್ಯಾಷನಲ್, 3 ನೇ ಮಹಡಿ, MSDC ಕಟ್ಟಡ, ಈಶ್ವರ್ ನಗರ, ಮಣಿಪಾಲ್
ಸಂಪರ್ಕಿಸಿ: 8123165068