ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿ.ಎಂ.ಎ. ಪೈ ಫೌಂಡೇಶನ್‌ನ ಘಟಕ)MSDC ಯು BOSCH ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ 2 ತಿಂಗಳ ಉದ್ಯೋಗಾಧಾರಿತ ಕೋರ್ಸ್ ಬೋಷ್ LEAP ನ್ನು ಆರಂಭಿಸಿದೆ. ಕಲಿ, ಸಂಪಾದಿಸು, ಮುಂದುವರಿ, ಪ್ರಗತಿ ಸಾಧಿಸು, ಎನ್ನುವ ಘೋಷವಾಕ್ಯದೊಂದಿಗೆ ಈ ಕೋರ್ಸ್ ಗಳು ಕೌಶಲ್ಯಗಳನ್ನು ಕಲಿಸಲಿದೆ. 100% ಉಚಿತ ತರಬೇತಿ ಇದಾಗಿದ್ದು ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC)ದಲ್ಲಿ ನಡೆಯಲಿದೆ.
ತರಬೇತಿಯ ಅವಧಿ 2 ತಿಂಗಳು (8 ವಾರಗಳು). ಇದು ಆಟೋಮೊಬೈಲ್ ತರಬೇತಿಯಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
10ನೇ / 12ನೇ / ಡಿಪ್ಲೊಮಾ ಪೂರ್ಣಗೊಳಿಸಿದವರು
ಉದ್ಯೋಗ ಅನ್ವೇಷಕರು ಹಾಗೂ ಉದ್ಯೋಗ ಬದಲಾವಣೆ ಬಯಸುವವರು, ಆಟೋಮೊಬೈಲ್ ಕ್ಷೇತ್ರಕ್ಕೆ ತಯಾರಾಗುತ್ತಿರುವ ವಿದ್ಯಾರ್ಥಿಗಳು, LEAP ತರಬೇತಿ ವಿಭಾಗಗಳು, ಸರ್ವಿಸ್ ಅಡ್ವೈಸರ್ ಗಳು ಭಾಗವಹಿಸಬಹುದಾಗಿದೆ.
ಯಾವೆಲ್ಲಾ ತರಬೇತಿಗಳು?
ಆಟೋಮೊಬೈಲ್ ತಾಂತ್ರಿಕ (2 ಚಕ್ರ ವಾಹನ)
ಆಟೋಮೊಬೈಲ್ ತಾಂತ್ರಿಕ (4 ಚಕ್ರ ವಾಹನ)
MSDC ಸಂಸ್ಥೆಯು ಉದ್ಯೋಗಾಧಾರಿತ ತರಬೇತಿಯನ್ನು ಅನುಭವಸ್ಥ ತರಬೇತಿದಾರರ ಮೂಲಕ ನೀಡುತ್ತಿದೆ. ಬೋಷ್ ಮತ್ತು MSDC ಪ್ರಮಾಣಪತ್ರವು ಮೌಲ್ಯಯುತವಾಗಿದೆ.ಈ ತರಬೇತಿ ಉದ್ಯೋಗಾಧಾರಿತ ಕ್ಷೇತ್ರಕ್ಕೆ ತೆರೆದುಕೊಳ್ಳುವಂತೆ ಸಹಾಯ ಮಾಡಲಿದೆ. ಹಾಗಾದ್ರೆ ತಡ ಯಾಕೆ. ನೀವೂ ಆಸಕ್ತರಾಗಿದ್ದಲ್ಲಿ ಕೂಡಲೇ ಈ ತರಬೇತಿಗೆ ಸೇರಿಕೊಳ್ಳಿ
ಕರೆ ಮಾಡಿ: ಹಿತೇಂದರ್: 9588503251, ಡಾ. ಕೃಷ್ಣ: 9738769680, [email protected]
















