ಮಣಿಪಾಲ ಜ್ಞಾನಸುಧಾ : ಸ್ವಾತಂತ್ರ್ಯ ದಿನಾಚರಣೆ; ದೇವ ಭಕ್ತಿಗೂ ಮಿಗಿಲು ದೇಶಭಕ್ತಿ : ಮುನಿರಾಜ ರೆಂಜಾಳ

ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಹಾಗೂ
ಮಣಿಪಾಲ ಪ್ರಿ ಯುನಿವರ್ಸಿಟಿ ಕಾಲೇಜುಗಳ ಸಂಯಕ್ತ
ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು
ಆಚರಿಸಲಾಯಿತು.

ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸಂಚಾಲಕರಾದ ಶ್ರೀ ಪ್ರಕಾಶ್ ಶೆಟ್ಟಿಯವರು
ಧ್ವಜಾರೋಹಣಗೈದರು. ಸ್ವಾತಂತ್ರ್ಯೋತ್ಸವದ ಶುಭ
ಸಂದರ್ಭದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತ ಶ್ರೀ
ಮುನಿರಾಜ ರೆಂಜಾಳ ಅವರು ಸ್ವಾತಂತ್ರ್ಯದ ನೆಲೆ ಬೆಲೆ
ವಿಷಯದ ಕುರಿತು ಮಾತನಾಡಿದರು.

“ದೇವರಿಗೆ ಮುಖಕ್ಕೆ ನೇರವಾಗಿ ಕೈ ಮುಗಿದರೆ ಆಕಾಶದೆತ್ತರಕ್ಕೆ ಹಾರುವ ತ್ರಿವರ್ಣ ಧ್ವಜಕ್ಕೆ ತಲೆ ಎತ್ತಿ ಸೆಲ್ಯೂಟ್ ಮಾಡುವ ಮೂಲಕ ‘ದೇವ ಭಕ್ತಿಗೂ ಮಿಗಿಲು ದೇಶಭಕ್ತಿ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು. ದೇಶದ ಸ್ವಾತಂತ್ರ‍್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಬಲಿದಾನಿಗಳನ್ನು ಸ್ಮರಿಸುವ ಈ ದಿನದಂದು ದೇಶಕ್ಕಾಗಿ ಜೀವಿಸುವ ದೃಢ ಸಂಕಲ್ಪ ಮಾಡಬೇಕಾಗಿದೆ.

ದೇಶಪ್ರೇಮವನ್ನು ನಮ್ಮ ವ್ಯಕ್ತಿತ್ವ, ನಡವಳಿಕೆ, ಸಂಸ್ಕಾರಯುತ ಜೀವನ ಶೈಲಿಯ ಮೂಲಕ ತೋರ್ಪಡಿಸಬೇಕಾಗಿರುವುದರೊಂದಿಗೆ ನಾವು ಬದುಕಬೇಕು
ಮತ್ತು ಇತರರನ್ನು ಬದುಕಲು ಬಿಡಬೇಕು ಎಂಬ ಸರಳ
ಸೂತ್ರವನ್ನು ಅಳವಡಿಸಿಕೊಂಡು ಬದುಕಬೇಕಾಗಿದೆ.

ನಿನಗೆ ಯಾರು ಯಾವುದನ್ನು ಮಾಡಬಾರದು ಎಂದು
ಬಯಸುತ್ತೀಯೋ ಅದನ್ನು ಯಾರಿಗೂ ನೀನೂ ಮಾಡಬೇಡ
ಎಂಬ ತತ್ವವನ್ನು ಅರ್ಥಮಾಡಿಕೊಂಡು, ಸ್ವಾತಂತ್ರ‍್ಯವನ್ನು
ಬಳಸಿ ನಾವು ಸುಖವಾಗಿರುವುದರೊಂದಿಗೆ ನಮ್ಮ ಸುತ್ತಲೂ
ಇರುವವರನ್ನು ಸುಖವಾಗಿರಲು ಅನುವು ಮಾಡಿಕೊಡಬೇಕು”
ಎಂಬ ಸ್ವಾತಂತ್ರ‍್ಯ ಸಂದೇಶ ಸಾರಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಹಾಗೂ ಅಜೆಕಾರ್ ಪದ್ಮ ಗೋಪಾಲ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ರವಿ ಜಿ., ಹೇಮಂತ
ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಶಮಿತಾ
ಕಾರ್ಯಕ್ರಮ ನಿರೂಪಿಸಿ ವಂದಿಸಿದರು.