ಉಡುಪಿ: ಸಂಪೂರ್ಣ ಟಿಂಟ್ ಅಳವಡಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ತೆರಳುತ್ತಿದ್ದ ಕಾರೊಂದನ್ನು ಮಣಿಪಾಲ ಪೊಲೀಸರು ತಡೆದು ಚಾಲಕ ಹಾಗೂ ಕಾರನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಕಣ್ಣೂರು ಶೋಬೈಲ್ ನೀಲಾಕತ್(26) ಎಂಬಾತ ನೀಲಿ ಬಣ್ಣದ ಕಾರನ್ನು ಉಡುಪಿ ನಗರದಿಂದ ಹಿರಿಯಡಕ ಕಡೆ ಅಪಾಯಕಾರಿಯಾಗಿ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ ಅಪಘಾತ ಉಂಟು ಮಾಡುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದನು. ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ವಿಪರೀತ ಕರ್ಕಶ ಶಬ್ದ ಮಾಡಿಕೊಂಡು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಈತನನ್ನು ಬೆನ್ನಟ್ಟಿದ ಮಣಿಪಾಲ ಪೊಲೀಸರು ಎಂಐಟಿ ಜಂಕ್ಷನ್‌ನಲ್ಲಿ ಕಾರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.












